ತಿರುವನಂತಪುರಂ: ಜನ್ಮಭೂಮಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ತಿರುವನಂತಪುರಂನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳು ಬೆಂಬಲ ನೀಡುತ್ತಿವೆ.
ಕಾರ್ಯಕ್ರಮದ ಭಾಗವಾಗಿ ನಡೆಯುವ ಪ್ರದರ್ಶನದಲ್ಲಿ ಪ್ರವಾಸೋದ್ಯಮ ಇಲಾಖೆಯು ವಿಶೇಷ ಮಂಟಪವನ್ನು ಸ್ಥಾಪಿಸಿದೆ.ಸಾಂಸ್ಕೃತಿಕ ಇಲಾಖೆಯು ಕಾರ್ಯಕ್ರಮಕ್ಕೆ ಕಲಾವಿದರನ್ನು ಒದಗಿಸುತ್ತದೆ.
ಜನ್ಮಭೂಮಿ ಪ್ರತಿನಿಧಿಗಳಾದ ಪಿ. ಶ್ರೀಕುಮಾರ್ ಮತ್ತು ಆರ್. ಪ್ರದೀಪ್ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಕಾರ್ಯಕ್ರಮದ ರೂಪರೇಷೆಯನ್ನು ಹಸ್ತಾಂತರಿಸಿದರು. ಜಯಂತ್ಯುತ್ಸವ ಆಚರಣೆಗೆ ಶುಭ ಹಾರೈಸಿದ ಸಚಿವರು,ಭಾಗವಹಸುವುದಾಗಿ
ಮಾಹಿತಿ ನೀಡಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್, ನಾಯಕರಾದ ವಿ.ವಿ. ರಾಜೇಶ್ ಮತ್ತು ಅಡ್ವ. ಬಿ. ರಾಧಾಕೃಷ್ಣನ್ ಮೆನನ್ ಉಪಸ್ಥಿತರಿದ್ದರು.
ಕೇಂದ್ರ ಸಚಿವರು ಶಬರಿಮಲೆಗೆ ಭೇಟಿ ನೀಡಲು ಕೇರಳಕ್ಕೆ ಆಗಮಿಸಿದ್ದರು. ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ಮೊಹಮ್ಮದ್ ರಿಯಾಜ್ ಅವರು ತಿರುವನಂತಪುರಂನಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದರು.
ಶಾಸಕ ಚಾಂಡಿ ಉಮ್ಮನ್, ಶಿವಗಿರಿ ಮಠದ ಮಾಜಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ರಿತಂಬರಾನಂದ ಅವರು ಕೂಡ ಕೇಂದ್ರ ಸಚಿವರನ್ನು ಭೇಟಿ ಮಾಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದ ಶೆಖಾವತ್, ಜೆಎನ್‌ವಿಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಅವರು ಕಿಸಾನ್ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸ್ವದೇಶಿ ಜಾಗರಣ್ ಮಂಚ್‌ನ ಸಹ-ಸಂಚಾಲಕ ಮತ್ತು ಸೀಮಾ ಜನ ಕಲ್ಯಾಣ ಸಮಿತಿಯ ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆಗಳನ್ನು ಅಲಂಕರಿಸಿದ್ದರು.