ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು ಇದರ ರಾಜ್ಯ (ಕೇಂದ್ರ) ಸಮಿತಿಯ ಮಹಾಸಭೆ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಾರ್ಷಿಕ ವರದಿ, ಶರತ್ ಕುಮಾರ್ ಯಂ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಸಂಘಟನಾತ್ಮಕ ಚರ್ಚೆ ನಡೆಯಿತು. ಸಂಘಟನೆ ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ ಸಿ.ಎಚ್, ಕಾರ್ಯದರ್ಶಿ ಜೀವನ್ ಕುಮಾರ್, ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ ನವಪ್ರಸಾದ್, ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಹರೀಶ್, ಕೋಶಾಧಿಕಾರಿ ಕುಶ ಪಿ.ಎಲ್ ಚರ್ಚೆಯಲ್ಲಿ ಭಾಗವಹಿಸಿದರು.
ಕೇಂದ್ರ ಸಮಿತಿ ಅಧಿಕೃತ ವಕ್ತಾರ ಸುಕೇಶ್ ಎ, ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಉಪಸ್ಥಿತರಿದ್ದರು. ಈ ಸಂದರ್ಭ ಕುಂಜತ್ತೂರು ಶಾಲೆಯ ದಿವಾಕರ್ ಬಲ್ಲಾಳ್ ಸಾಹಿತ್ಯ ಹಾಗೂ ಕೊಡ್ಲಮೊಗರು ಶಾಲೆಯ ಸಂದೀಪ್ ಆರ್ ಬಲ್ಲಾಳ್ ಅವರ ಸಂಗೀತ ಸಂಯೋಜನೆಯಲ್ಲಿ ಕನ್ನಡ ಅಧ್ಯಾಪಕರ ರಾಜ್ಯ ಸಮ್ಮೇಳನದಂದು ಹಾಡಿದ "ಕಾಸರಗೋಡು ಕನ್ನಡದ ನೆಲೆವೀಡು" ಹಾಡಿನ ಧ್ವನಿಸುರುಳಿಯನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಬಿಡುಗಡೆಗೊಳಿಸಿದರು. ಈ ಸಂದರ್ಭ ರಾಜ್ಯ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ಮಂಜೇಶ್ವರ ಜಿ.ಡಬ್ಲ್ಯೂ.ಎಲ್.ಪಿ ಶಾಲೆ ಮುಖ್ಯ ಶಿಕ್ಷಕ ಸುಕೇಶ್. ಎ, ಪ್ರಧಾನ ಕಾರ್ಯದರ್ಶಿಯಾಗಿ ಕಿಳಿಂಗಾರು ಎ.ಎಲ್.ಪಿ.ಶಾಲೆ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಕುಂಟಿಕಾನ ಎ.ಎಸ್.ಬಿ.ಎಸ್. ಶಿಕ್ಷಕ ಶರತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪ್ರಭಾವತಿ ಕೆದಿಲಾಯ, ಉಮೇಶ್ ಕೆ, ಶ್ರೀಲತಾ, ಕಾರ್ಯದರ್ಶಿಗಳಾಗಿ, ಜಯಪ್ರಶಾಂತ್ ಪಾಲೆಂಗ್ರಿ, ಪ್ರದೀಪ್ ಕೆ.ವಿ, ನವೀನ್ ಕುಮಾರ್ ಪಿ., ವಿನೋದ್ ರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಜಬ್ಬಾರ್ ಬಿ, ಅಧಿಕೃತ ವಕ್ತಾರರಾಗಿ ಬಾಬು ಕೆ, ಲೆಕ್ಕ ಪರಿಶೋಧಕರಾಗಿ ಪುರುಷೋತ್ತಮ ಕುಲಾಲ್, ಅಬ್ದುಲ್ ರಹಿಮಾನ್ ಹಾಗೂ ವಿಠಲ ಅಡ್ವಳ ಅವರನ್ನು ಆಯ್ಕೆಮಾಡಲಾಯಿತು.
ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಜಬ್ಬಾರ್ ಬಿ ಕಾರ್ಯಕ್ರಮ ನಿರೂಪಿಸಿದರು. ಶರತ್ ಕುಮಾರ್ ಯಂ ವಂದಿಸಿದರು.