ಬೇಸಿಗೆಯ ಓಡಾಟವು ಬಹುಬೇಗ ನಿಮಗೆ ಆಯಾಸ ಉಂಟುಮಾಡುವ ಜೊತೆಗೆ ನಿಮ್ಮ ತ್ವಚೆಯ ಸೌಂದರ್ಯ ಕೂಡ ಹಾನಿಗೊಳಗಾಗುತ್ತೆ. ಸೂರ್ಯನ ಬೆಳಕಿಗೆ ಮುಖ ಒಡ್ಡಿದರೆ ಸಾಕು ಕಪ್ಪಾಗುವುದು ಕಲೆಯಾಗುವುದು ನೋಡಬಹುದು, ಮುಖದ ಕಾಂತಿ ಕುಂದುವುದು, ಅಲರ್ಜಿ ರೀತಿಯ ಸಮಸ್ಯೆಯನ್ನೂ ಕೂಡ ಈ ಸಮಯದಲ್ಲಿ ನಾವು ನೋಡಬಹುದು. ಹೆಚ್ಚಾಗಿ ಸೌಂದರ್ಯಕ್ಕೆ ಒತ್ತು ನೀಡುವ ಮಹಿಳೆಯರು ಈ ಸಮಸ್ಯೆಗೆ ಒಳಗಾಗುವುದು ಸಾಮಾನ್ಯ.
ಮನೆಯಿಂದ ಹೊರಬರುವಾಗ ಸನ್ಸ್‌ಸ್ಕ್ರೀನ್, ಮಾಸ್ಕ್, ದುಪ್ಪಟ್ಟ, ಚತ್ರಿ ಹೀಗೆ ಹಲವು ಬಗೆಯ ರಕ್ಷಣಾತ್ಮಕ ವಿಧಾನ ಬಳಸಿದರೂ ಕೂಡ ಕೈ ಕಾಲು, ಮುಖದ ಚರ್ಮ ಕಪ್ಪಾಗುವುದು ನೋಡಬಹುದು. ಈಗಂತು 5 ರಿಂದ 10 ನಿಮಿಷ ನೀವು ಬಿಸಿಲಿಗೆ ಬಂದರೂ ಸಾಕು. ತ್ವಚೆ ಒಣಗಿದಂತೆ ಕಪ್ಪಾಗಿ ಕಾಣಿಸುತ್ತದೆ. ನೀವು ಎಷ್ಟೇ ಕ್ರೀಮ್‌ಗಳನ್ನು ಬಳಸಿದರು ಕೂಡ ಈ ಸಮಸ್ಯೆಯಿಂದ ಹೊರಬರಲು ಆಗೋದಿಲ್ಲ.
ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಒಂದು ಮದ್ದಿನ ಮೂಲಕ ನಿಮ್ಮ ಕಪ್ಪು ಕಲೆಯ ನಿವಾರಣೆ ಮಾಡುವುದು ಹೇಗೆ ಅನ್ನೋದನ್ನು ತಿಳಿಸಲಿದ್ದೇವೆ. ಈ ರೀತಿ ಮಾಡಿದ್ರೆ ನಿಮ್ಮ ಮುಖದಲ್ಲಿನ ಕಪ್ಪು ಕಲೆಗಳು, ಅದರಲ್ಲೂ ಬಿಸಿಲಿನಿಂದ ಉಂಟಾಗುವ ಕಪ್ಪು ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ಹಾಗಾದ್ರೆ ಬಿಸಿಲಿನಿಂದ ನಿಮ್ಮ ಮುಖ ಬಾಡಿದಂತೆ, ಕಪ್ಪಾಗಿದ್ದರೆ ಏನು ಮಾಡಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮನೆಯಲ್ಲಿನ ವಸ್ತುಗಳನ್ನೇ ಬಳಸಿಕೊಂಡು ಯಾವ ರೀತಿ ಪರಿಹಾರ ಮಾಡಬಹುದು ಎಂಬುದನ್ನು ನೀವೇ ನೋಡಿ.
ಐಸ್ ವಾಟರ್ ಫೇಷಿಯಲ್
ನೀವು ಈ ರೀತಿಯ ಫೇಷಿಯಲ್ ಐಡಿಯಾ ಹಲವು ಕಡೆಗಳಲ್ಲಿ ಕೇಳಿರಬಹುದು. ಇದೊಂದು ನೈಸರ್ಗಿಕವಾಗಿ ನಿಮ್ಮ ಕಪ್ಪು ಕಲೆಗಳ ನಿವಾರಿಸುವ ವಿಧಾನವಾಗಿದೆ. ಬಿಸಿಲಿನಿಂದ ಮರಳಿ ಮನೆಗೆ ಬಂದಾಗ ಐಸ್ ವಾಟರ್ ತೆಗೆದುಕೊಂಡು ಮುಖ ತೊಳೆದುವುದು, ಇಲ್ಲವೆ ಐಸ್ ಕ್ಯೂಬ್ ಮೂಲಕ ಮುಖವನ್ನು 5 ನಿಮಿಷ ಮಸಾಜ್ ಮಾಡುವುದು. ಇದರಿಂದ ಮುಖದಲ್ಲಿನ ಹಿಗ್ಗಿದ ರಂಧ್ರಗಳು ಕುಗ್ಗುತ್ತವೆ, ಹಾಗೆ ಮುಖ ಬಿಗಿಯಾಗುತ್ತದೆ. ಮುಖದ ಚರ್ಮದ ಕಲ್ಮಶ ಹೊರಹಾಕಬಹುದು. ಆರೋಗ್ಯಕರ ಹೊಳಪಿಗೆ ಇದು ಸಹಕಾರಿಯಾಗಿದೆ.
ಜೇನು ತುಪ್ಪ ಮೊಸರು
ಬಿಸಿಲಿನಿಂದ ನಿಮ್ಮ ಮುಖ ಹಾಳಾಗಿದ್ದರೆ ಈ ರೀತಿಯ ಮನೆ ಮದ್ದು ಅದ್ಭುತವಾದ ಫಲಿತಾಂಶ ನೀಡಲಿದೆ. ನೀವು ಒಂದು ಬೌಲ್‌ನಲ್ಲಿ ಸ್ವಲ್ಪ ಮೊಸರು ತೆಗೆದುಕೊಂಡು ಅದಕ್ಕೆ ಜೇಣು ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ 5 ನಿಮಿಷ ಬಿಡಿ. ಮುಖವನ್ನು ತಣ್ಣೀರಿನಿಂದ ತೊಳೆದು ನಂತರ ಕೆಳಗಿನಿಂದ ಮೇಲ್ಮುಖವಾಗಿ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಹಚ್ಚಿದ ಬಳಿಕ 5 ನಿಮಿದಷ ಹಾಗೆಯೆ ಬಿಡಿ. ಇದು ನಿಮ್ಮ ಮುಖದಲ್ಲಿನ ಕಪ್ಪು ಕಲೆ, ಧೂಳಿನಿಂದ ಉಂಟಾದ ಹಾನಿ, ಟ್ಯಾನಿಂಗ್ ಎಲ್ಲವನ್ನು ನಿವಾರಿಸಲಿದೆ. ವಾರದಲ್ಲಿ ಎರಡು ಬಾರಿ ಮಾಡಿದರೆ ಮುಖಕ್ಕೆ ಹೊಸ ಹೊಳಪು ಬರಲಿದೆ.
ಅಲೂವೇರಾ ಮಸಾಜ್
ನಿಮ್ಮ ಮನೆಯಲ್ಲಿ ಅಲೂವೆರಾ ಗಿಡವಿದ್ದರೆ ಸುಲಭವಾಗಿ ಅದರಿಂದ ಮಸಾಜ್ ಮಾಡಬಹುದು. ಅದರ ಎಲೆ ಕತ್ತರಿಸಿ ಅದರ ಲೋಳೆಯನ್ನು ಮುಖದ ಮೇಲೆ ಮಸಾಜ್ ಮಾಡುವುದರಿಂದ ಟ್ಯಾನಿಂಗ್, ಮಾಲಿನ್ಯ ಕಾರಣಕ್ಕೆ ಉಂಟಾಗಿರುವ ಚರ್ಮದ ಹಾನಿಯನ್ನು ಸರಿಪಡಿಸಬಹುದು. ಇದರಿಂದ ನಿಮ್ಮ ಮುಖ ಮತ್ತೆ ಕಾಂತಿ ಪಡೆದುಕೊಳ್ಳುತ್ತದೆ. ಇದರಿಂದ ಯಾವುದೇ ಹಾನಿಯೂ ಇಲ್ಲ. ನೀವು ವಾರದಲ್ಲಿ ಎಷ್ಟು ಬಾರಿಯಾದರು ಮಾಡಬಹುದು.