ಬಿಜಾಪುರ: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮೂವರು ನಕ್ಸಲರ ಕುರಿತು ಮಾಹಿತಿ ನೀಡಿದವರಿಗೆ ₹15 ಲಕ್ಷ ಬಹುಮಾನ ಘೋಷಿಸಿಲಾಗಿತ್ತು ಎಂದು ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.
ಶರಣಾಗಿರುವವರನ್ನು ದಿಲೀಪ್ ಅಲಿಯಾಸ್ ಸಂತು, ಮಂಜುಳಾ ಅಲಿಯಾಸ್ ಲಖ್ಮಿ ಮತ್ತು ಸುನೀತಾ ಅಲಿಯಾಸ್ ಜಂಕಿ ಎಂದು ಗುರುತಿಸಲಾಗಿದೆ. ಇವರ ತಲೆಗೆ ತಲಾ ₹5 ಲಕ್ಷ ಇನಾಮು ಘೋಷಣೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಸ್ತ್ರಾಸ್ತ್ರದೊಂದಿಗೆ ಮೂವರು ನಕ್ಸಲರು ಶರಣಾಗಿದ್ದಾರೆ. ದಿಲೀಪ್, ನಿಷೇಧಿತ ಸಂಘಟನೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಸದಸ್ಯ ಮತ್ತು ಎಸ್‌ಡಿಕೆ ಸಮಿತಿಯ ಉಪ ಕಮಾಂಡರ್ ಆಗಿ ಸಕ್ರಿಯರಾಗಿದ್ದರು. ಮಂಜುಳಾ ಪ್ರದೇಶ ಸಮಿತಿಯ ಸದಸ್ಯರಾಗಿದ್ದರು. ಸುನೀತಾ, ನಿಷೇಧಿತ ಸಂಘಟನೆಯ ಬಾರ್‌ಗಢ ಪ್ರದೇಶ ಸಮಿತಿಯ ಸದಸ್ಯರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಸರ್ಕಾರದ ನಕ್ಸಲಿಸಂ ನಿರ್ಮೂಲನ ನೀತಿ ಮತ್ತು ಪೊಲೀಸರ ಪುನರ್ವಸತಿ ಅಭಿಯಾನದಡಿ ಶರಣಾಗತಿಯಾದ ನಕ್ಸಲರಿಗೆ ಸರ್ಕಾರದಿಂದ ಎಲ್ಲಾ ಯೋಜನೆಗಳು ಸಿಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ : ಗರಿಯಾಬಂದ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮೂವರು ನಕ್ಸಲರ ಕುರಿತು ಮಾಹಿತಿ ನೀಡಿದವರಿಗೆ ₹15 ಲಕ್ಷ ಬಹುಮಾನ ಘೋಷಿಸಿಲಾಗಿತ್ತು ಎಂದು ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.