ತಿರುವನಂತಪುರಂ: ಆಶಾ ಕಾರ್ಯಕರ್ತರ ವಿರುದ್ಧ ಸರ್ಕಾರ ಪ್ರತೀಕಾರದ ಕ್ರಮ ಕೈಗೊಳ್ಳುತ್ತಿದೆ. ಸಚಿವಾಲಯ ಮುತ್ತಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಆಶಾ ಕಾರ್ಯಕರ್ತರ ಒಂದು ತಿಂಗಳ ಗೌರವಧನವನ್ನು ತಡೆಹಿಡಿಯಲಾಗಿದೆ.
ಆಲಪ್ಪುಳ ಜಿಲ್ಲೆಯಲ್ಲಿ 146 ಜನರ ಫೆಬ್ರವರಿ ತಿಂಗಳ ಗೌರವಧನವನ್ನು ಯಾವುದೇ ಸೂಚನೆ ನೀಡದೆ ತಡೆಹಿಡಿಯಲಾಗಿದೆ. ಒಂದು ದಿನದ ಮುಷ್ಕರದಲ್ಲಿ ಭಾಗವಹಿಸಿದ್ದಕ್ಕಾಗಿ ಒಂದು ತಿಂಗಳ ಗೌರವಧನವನ್ನು ತಡೆಹಿಡಿಯುವುದರ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಅನೇಕ ಸಿಪಿಎಂ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ. ಆದರೆ ಆಶಾ ಕಾರ್ಯಕರ್ತರಾದ ನಮ್ಮ ಗೌರವಧನವನ್ನು ಎಂದಿಗೂ ತಡೆಹಿಡಿಯಲಾಗಿಲ್ಲ ಎಂದು ಆಶಾ ಕಾರ್ಯಕರ್ತೆಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತಿರುವನಂತಪುರಂ ಜಿಲ್ಲೆಯ ಆಶಾ ಕಾರ್ಯಕರ್ತರ ಗೌರವಧನವನ್ನು ಕೂಡಾ ತಡೆಹಿಡಿಯಲಾಗಿದೆ. ಹಣ ಲಭಿಸದ ಆಶಾ ಕಾರ್ಯಕರ್ತರು ಮೊನ್ನೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರನ್ನು ಭೇಟಿ ಮಾಡಿ ದೂರು ದಾಖಲಿಸಿರುವರು. ಸಚಿವಾಲಯದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಮುಷ್ಕರ 47ನೇ ದಿನ ನಿನ್ನೆಗೆ ಪೂರ್ಣಗೊಳಿಸಿದೆ. ಜೊತೆಗೆ, ಮೂವರು ಆಶಾ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ ಎಂಟನೇ ದಿನ ಸಂದು ಹೋಗಿದೆ. ಆಶಾ ಕಾರ್ಯಕರ್ತರಿಗೆ ಹೆಚ್ಚುವರಿ ವೇತನ ನೀಡಲು ಹತ್ತಕ್ಕೂ ಹೆಚ್ಚು ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಸ್ವಂತ ನಿಧಿಯಿಂದ ಹಣವನ್ನು ಮೀಸಲಿಟ್ಟಿವೆ. ಆದರೆ, ಸ್ಥಳೀಯಾಡಳಿತ ಸಚಿವ ಎಂ.ಬಿ. ರಾಜೇಶ್ ಇದರ ವಿರುದ್ಧ ಬೆದರಿಕೆ ಹಾಕಿದ್ದಾರೆ. ಗೌರವಧನ ಪಾವತಿಸಲು ಬಿಡುವುದಿಲ್ಲ ಎಂಬುದು ಸಚಿವರ ನಿಲುವು, ಬಜೆಟ್ ಚರ್ಚೆಯ ನಂತರ, ಸ್ಥಳೀಯಾಡಳಿತ ಸಂಸ್ಥೆಗಳು ಅನುಮೋದನೆಗಾಗಿ ಸರ್ಕಾರವನ್ನು ಸಂಪರ್ಕಿಸಲಿವೆ.