ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು, ಮಹಾರಾಷ್ಟ್ರ ಸಕಾಲಿ ನಿವಾಸಿ ಪ್ರಕಾಶ್ ಗಣೇಶ್‍ಮಲ್ ಜೈನ್(65)ಮೃತಪಟ್ಟಿದ್ದಾರೆ. ಭಾನುವಾರ ನಸುಕಿಗೆ ಮಂಗಳಾ ಎಕ್ಸ್ಪ್ರೆಸ್ ರೈಲು ಪ್ರಯಾಣದ ಮಧ್ಯೆ ಬೇಕಲ ರೈಲ್ವೆ ನಿಲ್ದಾಣ ಸನಿಹ ಪ್ರಕಾಶ್ ಗಣೇಶ್‍ಮಲ್ ಅವರು ಆಯತಪ್ಪಿ ರೈಲಿನಿಂದ ಬಿದ್ದಿದ್ದರು. ಇದನ್ನು ಕಂಡ ಪ್ರಯಾಣಿಕರೊಬ್ಬರು ತಕ್ಷಣ ರೈಲಿನ ಚೈನು ಎಳೆದು ನಿಲುಗಡೆಗೊಳಿಸಿದ್ದಾರೆ. ಮಾಹಿತಿ ಪಡೆದ ಬೇಕಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದಾಗ ಬೇಕಲ ರೈಲ್ವೆ ನಿಲ್ದಾಣ ಸನಿಹ ಹಳಿಯಲ್ಲಿ ಪ್ರಕಾಶ್ ಗಣೇಶ್‍ಮಲ್ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.