ಕುಂಬಳೆ: ಸರೋವರ ದೇಗುಲ, ಕುಂಬಳೆ ಸನಿಹದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯ ವಠಾರದಲ್ಲಿ ಸುಮಾರು 35ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತಿಥಿಗೃಹ'ಅನಂತ ಯಾತ್ರಿ ನಿವಾಸ'ದ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಜರುಗಿತು.
ಕಚೇರಿ, ನಾಲ್ಕು ಕೊಠಡಿಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡವನ್ನು ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಲಯ ಅದ್ಯಕ್ಷ ಕೆ.ವಿ ಸುರೇಂದ್ರನ್ ಉದ್ಘಾಟಿಸಿದರು. ನಂತರ ಅನಂತಶ್ರೀ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಉದ್ಯಮಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಆಳ್ವ, ಗ್ರಾಪಂ ಸದಸ್ಯ ಜನಾರ್ದನ ಪೂಜಾರಿ, ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣಯ್ಯ ಅನಂತಪುರ, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ.ಶಂಕರ ಆದೂರು, ಅನಂತಪುರ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟಿ ಕುಶಲಪ್ಪ ಪೂಜಾರಿ, ಪಾಲಾಕ್ಷ ರೈ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ಎಂ ಸತ್ಯನಾರಾಯಣನ್, ಬಳ್ಳಾರಿಯ ಉದ್ಯಮಿ ಡಾ. ಸೋಮೇಶ್ವರ ಎಫ್. ಗಡ್ಡಿ, ರಾಜಶೇಖರ ಅನಂತಪುರ, ಬೆಂಗಳೂರು ಇನ್‍ಫೋಸಿಸ್‍ನ ಸಂತೋಷ್ ಅನಂತಪುರ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಾಧವ ಕಾರಂತ, ಪ್ರಕೃತಿ ಯುವತಂಡದ ಕಾರ್ಯದರ್ಶಿ, ಸಮಾಜಸೇವಕ ಸುನಿಲ್‍ಕುಮಾರ್ ಅನಂತಪುರ ಉಪಸ್ಥಿತರಿದ್ದರು.
ದೇವಸ್ಥಾನದ ಮುಖ್ಯ ಅರ್ಚಕ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಪ್ರಾರ್ಥನೆ ಹಾಡಿ ಹರಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಎಂ.ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸತ್ಯಸಂಕರ ಅನಂತಪುರ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಭಟ್ ಎಸ್. ವಂದಿಸಿದರು.