ಅಮ್ರೇಲಿ : ಆಟದ ಸವಾಲಿನಲ್ಲಿ ಗೆಲ್ಲಲು ಪ್ರಾಥಮಿಕ ಶಾಲೆಯ 25 ವಿದ್ಯಾರ್ಥಿಗಳು ಬ್ಲೇಡಿನಿಂದ ಕೈಯನ್ನು ಗಾಯಮಾಡಿಕೊಂಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಮೋಟಾ ಮುಂಜಿಯಾಸರ್ ಪ್ರೈಮರಿ ಶಾಲೆಯಲ್ಲಿ ಘಟನೆ ನಡೆದಿದೆ.
5-7ನೇ ತರಗತಿಯ ವಿದ್ಯಾರ್ಥಿಗಳು ಆಟದಲ್ಲಿ ಸೋತರೆ ₹10 ಪಾವತಿಸಬೇಕು ಎಂದು ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡಿದ್ದರು. ಆಟ ಗೆಲ್ಲಲು 25 ವಿದ್ಯಾರ್ಥಿಗಳು ಬ್ಲೇಡ್, ಪೆನ್ಲಿಲ್ ಹರಿತ ಮಾಡುವ ಸಾಧನದಿಂದ ಕೈಗೆ ಗಾಯಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ಶಾಲಾ ಆಡಳಿತ ಮಂಡಳಿಗೆ ವಿಚಾರ ತಿಳಿಸಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಪೋಷಕರು ಪೊಲೀಸರನ್ನು ಸಂಪರ್ಕಿಸಿ ತನಖೆಗೆ ಒತ್ತಾಯಿಸಿದ್ದಾರೆ.
ಪೊಲೀಸರು ಶಾಲೆಗೆ ತೆರಳಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇಡೀ ಶಾಲೆಯಲ್ಲಿ 300 ವಿದ್ಯಾರ್ಥಿಗಳಿದ್ದು, ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಾಗಿ