ತಿರುವನಂತಪುರಂ: ವೆಂಞರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿ ಅಫಾನ್ ಇನ್ನೂ ಇಬ್ಬರನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾನೆ. ತಟ್ಟತುಮಲದಲ್ಲಿ ವಾಸಿಸುತ್ತಿದ್ದ ಅಫ್ಫಾನ್ ತಾಯಿಯ ಇಬ್ಬರು ಸಂಬಂಧಿಕರನ್ನು ಕೊಲ್ಲುವುದು ಯೋಜನೆಯಾಗಿತ್ತು. ತನ್ನ ಅಜ್ಜಿ, ಚಿಕ್ಕಪ್ಪ ಲತೀಫ್, ಲತೀಫ್ ಪತ್ನಿ, ಗೆಳತಿ ಫರ್ಜಾನಾ, ತಮ್ಮ ಅಫ್ಸಾನ್ ಮತ್ತು ತಾಯಿ ಶೆಮಿನಾ ಅವರನ್ನು ಕೊಂದ ನಂತರ, ಅಫ್ಫಾನ್ ತಟ್ಟತುಮಲಕ್ಕೆ ಹೋಗಿ ಇನ್ನೂ ಇಬ್ಬರನ್ನು ಕೊಲ್ಲಲು ಯೋಜಿಸಿದ್ದ.
ಆದರೆ ಅಫಾನ್ ತನ್ನ ಕಿರಿಯ ಸಹೋದರನನ್ನು ಕೊಂದ ನಂತರ, ತನ್ನ ನೈತಿಕ ಸ್ಥೈರ್ಯ ಕುಗ್ಗಿತು ಮತ್ತು ಇಬ್ಬರನ್ನು ಕೊಲ್ಲುವ ಯೋಜನೆಯನ್ನು ಕೈಬಿಟ್ಟೆ ಎಂದು ಹೇಳಿರುವನು. ಅವರು ಹಣವನ್ನು ಬಡ್ಡಿಗೆ ನೀಡಿದ್ದು ಬೆದರಿಕೆ ಹಾಕುತ್ತಿದ್ದರು ಎಂದಾತ ಹೇಳಿದ್ದಾನೆ.
ಅವರು ಐದು ಲಕ್ಷ ರೂಪಾಯಿಗಳನ್ನು ಸಾಲ ನೀಡಿದ್ದು, ಬಳಿಕ ಸುಮಾರು 10 ಲಕ್ಷ ರೂಪಾಯಿಗಳನ್ನು ವಾಪಸ್ ಪಡೆದರು. ಅವರು ಇನ್ನೂ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲ್ಲಲು ಯೋಜಿಸಿದ್ದೆ ಎಂದು ಅಫಾನ್ ಸಾಕ್ಷ್ಯ ನುಡಿದಿದ್ದಾನೆ.
ಅಫಾನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮಾನಸಿಕ ಆರೋಗ್ಯ ತಜ್ಞರಿಗೆ ಇದು ಬಹಿರಂಗವಾಯಿತು. ಅಫಾನ್ ನನ್ನು ಇಂದು ಆಸ್ಪತ್ರೆಯಿಂದ ಜೈಲಿಗೆ ವರ್ಗಾಯಿಸಲಾಯಿತು. ಆತನ ಆರೋಗ್ಯ ಸುಧಾರಿಸಿದೆಯೆಂದು ವೈದ್ಯರು ಶಿಫಾರಸು ಮಾಡಿದ ನಂತರ ಜೈಲಿಗೆ ವರ್ಗಾಯಿಸಲಾಯಿತು. ಅಜ್ಜಿಯ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಈ ಬಂಧನ ನಡೆದಿದೆ.
ಇನ್ನಿಬ್ಬಬ್ಬರನ್ನು ಕೊಲ್ಲಲು ಯೋಜಿಸಿದ್ದ ಅಘಾನ್-ಕಿರಿಯ ಸಹೋದರನ ಕೊಲೆ ಬಳಿಕ ನಿರುತ್ಸಾಹಗೊಂಡೆನೆಂದ ಅಫಾನ್ ಹೇಳಿಕೆ
0
ಮಾರ್ಚ್ 02, 2025
Tags