ಮುಳ್ಳೇರಿಯ: ಬೆಳ್ಳೂರು ಗ್ರಾಪಂ ಕೃಷಿ ಭವನದ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯಲಾದ ಅಕ್ಕಿಯನ್ನು ನೇರವಾಗಿ ಗ್ರಾಹಕರಿಗೆ ದೊರಕಿಸಿ ಕೊಡುವ ಪ್ರಯತ್ನದ ಭಾಗವಾಗಿ "ನೆಟ್ಟಣಿಗೆ ರೈಸ್" ಬಿಡುಗಡೆಗೊಳಿಸಲಾಯಿತು.
ಪಂಚಾಯಿತಿ ಅಧ್ಯಕ್ಷ ಶ್ರೀಧರ ಯಂ.ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕøತ, ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅಕ್ಕಿಯ ಬ್ರ್ಯಾಂಡ್ ಬಿಡುಗಡೆಗೊಳಿಸಿದರು. ವೆಂಕಪ್ಪ ಮಣಿ ಭಟ್ ಕಿನ್ನಿಂಗಾರು, ಜಯ ಬೆಳೇರಿ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಕಾರಡ್ಕ ಬ್ಲಾಕ್ ಸಹಾಯಕ ಕೃಷಿ ನಿರ್ದೇಶಕಿ ಶೀನಾ ಕೆ.ವಿ.ಯೋಜನೆಯ ಬಗ್ಗೆ ವಿವರಿಸಿದರು. ರೈತರಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣಾ ಸಾಮಥ್ರ್ಯ ಬಲಪಡಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಪಿ.ವಿ.ವಿನೀತ್ ತರಬೇತಿ ನೀಡಿದರು. ಮೌಲ್ಯಾಧಾರಿತ ಉತ್ಪನ್ನಗಳ ಮಾರುಕಟ್ಟೆ ಹಾಗೂ ಕೃಷಿಕರಿಗೆ ಲಾಭ ಒದಗಿಸುವ ನಿಟ್ಟಿನಲ್ಲಿ ಕೃಷಿಕರ ಒಕ್ಕೂಟ ರಚಿಸಲಾಯಿತು.
ಗ್ರಾಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಗ್ರಾಪಂ ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ್ ರಾವ್, ಕೃಷಿ ಅಧಿಕಾರಿ ಅದ್ವೈತ್ ಎಂ.ವಿ. ಶುಭ ಹಾರೈಸಿದರು. ಜನ ಪ್ರತಿನಿಧಿಗಳು, ಕೃಷಿ ಸಹಾಯಕರು, ರೈತರು ಭಾಗವಹಿಸಿದ್ದರು.