ಪೆರ್ಲ: ಪಡ್ರೆ ಶಾಲೆಯಲ್ಲಿ ಹಿರಿಮೆಯ ಉತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳ ಸ್ವರಚಿತ ಇಂಗ್ಲಿಷ್ ಕವನ ಸಂಕಲನ "ಯುಪೋರಿಯಾ" ಹಾಗೂ ಒಂದನೇ ತರಗತಿಯ ಮಕ್ಕಳ ಸಂಯುಕ್ತ ದಿನಚರಿಯನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಗ್ರಾ.ಪಂ. ಸದಸ್ಯ ರಾಮಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಚಟುವಟಿಕೆಗಳ ಪ್ರದರ್ಶನಗಳು ಅಕ್ಷರಶ ಒಂದು ಕಲಿಕಾ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ್ ಕಡಂಬಳಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಏಳನೇ ವಾರ್ಡ್ ಸದಸ್ಯ ನರಸಿಂಹ ಪೂಜಾರಿ, ಪ್ರಭಾರ ಪ್ರಾಂಶುಪಾಲೆ ಉಷಾ ಕುಮಾರಿ, ಹಿರಿಯ ಶಿಕ್ಷಕಿ ಚಂದ್ರಾವತಿ, ಎಂ ಪಿ ಟಿ ಎ ಸದಸ್ಯೆ ಹರ್ಶಲತ, ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯ.ವಾಸುದೇವ ನಾಯಕ್ ಸ್ವಾಗತಿಸಿ, ಶಿಕ್ಷಕ ಶೀನಪ್ಪ ವಂದಿಸಿದರು . ರಕ್ಷಕರು,ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.