ಕುಂಬಳೆ: ಮಯೂರ ಕಳತ್ತೂರು ಇದರ ವಿಶೇಷ ಸಭೆ ಸಂಘದ ಹಿರಿಯ ಕಲಾವಿದರಾದ ಮಹಾಬಲ ಭಟ್ ಅವರ ಅಧ್ಯಕ್ಷತೆಯಲ್ಲಿ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಜರಗಿತು.
ಸಂಘದ ಆಶ್ರಯದಲ್ಲಿ ದಿ.ಮಂಜುನಾಥ ಭಂಡಾರಿ ಪಂಜಳ ಮತ್ತು ದಿ.ನಾರಾಯಣ ಮಾಸ್ತರ್ ಕಮಾರ್ತೆ ಅವರ ಸ್ಮರಣಾರ್ಥ ಸಮಾಜಮುಖಿ ಕಾರ್ಯಕ್ರಮದ ಜೊತೆಗೆ ನೂತನ ಸ್ಮಾರಕ ಮಂದಿರವನ್ನು ಗ್ರಂಥಾಲಯದ ರೂಪದಲ್ಲಿ ನಿರ್ಮಿಸುವುದಾಗಿಯೂ ಸಂಘವನ್ನು ನೂತನವಾಗಿ ರಿಜಿಸ್ಟ್ರೆಶನ್ ಮಾಡಿಸುವುದಾಗಿಯೂ ತೀರ್ಮಾಣಿಸಲಾಯಿತು.
ಸಂಘದ ನೂತನ ಕಾರ್ಯಕಾರಿ ಸಮಿತಿ ರೂಪಿಕರಿಸಲಾಯಿತು. ಗೌರವಾಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಕುಂಬಳೆ, ಅಧ್ಯಕ್ಷರಾಗಿ ಕೆ.ಸಿ.ಮೋಹನ್ ಕಳತ್ತೂರು, ಉಪಾಧ್ಯಕ್ಷರುಗಳಾಗಿ ಶ್ರೀನಿವಾಸ ಆಳ್ವ ಕಳತ್ತೂರು, ವೇಣುಗೋಪಾಲ್ ರೈ ಪುತ್ತಿಗೆ, ಕಾರ್ಯದರ್ಶಿಯಾಗಿ ಶ್ರೀಕೃಷ್ಣ ಕಳತ್ತೂರು, ಜೊತೆ ಕಾರ್ಯದರ್ಶಿಗಳಾಗಿ ಕೆ.ಸಿ.ಗೋಪಾಲ, ಶೇಷಪ್ಪ ಕಳತ್ತೂರು, ಕೋಶಾ„ಧಿಕಾರಿಯಾಗಿ ಪೃಥ್ವಿರಾಜ್ ಪಂಜಳ, ಸಮಿತಿ ಸದಸ್ಯರಾಗಿ ಕೃಷ್ಣ ಎ.ಕಡಂಕೋಡಿ ಕಿದೂರು, ಯು.ಎಂ.ಮೂಲ್ಯ ಕಿದೂರು, ಶಂಕರ ಬಿ.ಎನ್, ಕೃಷ್ಣ ಚೂಕ್ರಿ, ಪ್ರವೀಣ್ ರಾಜ್ ಆಳ್ಟ ಕಳತ್ತೂರು, ಅಶೋಕ ಪುಣಿಯೂರು, ವಿಶ್ವನಾಥ್ ಶೆಟ್ಟಿ ಕಿದೂರು, ವಸಂತ ಪುಣಿಯೂರು, ಶ್ರೀಧರ ಪುಣಿಯೂರು, ಬಾಲಕೃಷ್ಣ ಮುಂಡ್ರೇಲು, ಪೃಥ್ವಿರಾಜ್ ಕುಂಬಳೆ, ಬಾಬು ಬಂಗೇರ ಪುತ್ತಿಗೆ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಶ್ರೀನಿವಾಸ ಆಳ್ಟ ಕಳತ್ತೂರು ಸ್ಟಾಗತಿಸಿ, ಕೃಷ್ಣ ಕಳತ್ತೂರು ವಂದಿಸಿದರು.