ಮಂಜೇಶ್ವರ: ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಮಾ. 30ರಿಂದ ಎ. 6ರ ತನಕ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಮಾಲೋಚನಾ ಸಭೆ ಗುರುವಾರ ಮುಡಿಪಿನ ಶ್ರೀ ಕಿರಾತೇಶ್ವರ ಸ್ವಾಮಿ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಪ್ರಧಾನ ಸಂಚಾಲಕ ಜಗದೀಶ್ ಆಳ್ವ ಕುವೆತ್ತಬೈಲು ಮಾತನಾಡಿ ಹೊರೆಕಾಣಿಕೆ ಮೆರವಣಿಗೆಗೆ ರಂಗು ನೀಡುವಂತೆ ವಿವಿಧ ಪ್ರದರ್ಶನಗಳು, ಚೆಂಡೆ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಹಾಗೆಯೇ ಪೂರ್ಣ ಕುಂಭ ಕಲಶ ಹಿಡಿದು ಮುನ್ನಡೆಯುವ ಮಹಿಳೆಯರು ಹಾಗೂ ಹೊರೆಕಾಣಿಕೆ ಹೊತ್ತು ಸಾಗುವ ವಾಹನಗಳ ಸರತಿ ಸಾಲು ಶಿಸ್ತುಬದ್ಧವಾಗಿ ಸಾಗಲು ಸ್ವಯಂ ಸೇವಕರು ಮೆರವಣಿಗೆಯುದ್ದಕ್ಕೂ ಜವಬ್ದಾರಿ ಹೊರುತ್ತಾ ಮೆರಗು ನೀಡಬೇಕೆಂದು ಸಲಹೆ ನೀಡಿದರು.
ಮುಡಿಪಿನ್ನಾರ್ ಕ್ಷೇತ್ರದಿಂದ ಹೊರಡುವ ಹೊರೆಕಾಣಿಕೆಗೆ ಮೆರವಣಿಗೆ ಯಶಸ್ವೀಗಾಗಿ ವಿವಿಧ ಗ್ರಾಮಗಳ ವಿವಿಧ ಸಮಿತಿಗಳು ಸಂಘ-ಸಂಸ್ಥೆಗಳು ಬೇರೆಬೇರೆ ಸಮಾಜದ ವತಿಯಿಂದ ಬರುವಂತಹ ಕೊರೆ ಕಾಣಿಕೆ ಹೊತ್ತು ಸಾಗುವ ವಾಹನಗಳು ನಿಗದಿತ ಸಮಯದಲ್ಲಿ ಹಾಗೂ ಸಾಲಿನಲ್ಲಿ ಸೂಚಿಸಿದಂತಹ ಸ್ಥಳದಲ್ಲಿ ನಿಲ್ಲಬೇಕೆಂದು ವಿನಂತಿಸಿದರು.
ಹೊರ ಕಾಣಿಕೆಯಲ್ಲಿ ಬೇಕಾದ ವಿವಿಧ ಸಾಮಗ್ರಿಗಳ ಅಗತ್ಯವಿದ್ದರೂ ಅತ್ಯಗತ್ಯ ಹಾಗೂ ಸಮಿತಿ ತಿಳಿಸಿದ ಹೆಸರಿನ ವಸ್ತುಗಳನ್ನು ಮಾತ್ರ ಹೊರಕಾಣಿಕೆ ಮೆರವಣಿಗೆಯಲ್ಲಿ ತರುವುದರಿಂದ ತುಂಬಾ ಸಹಾಯವಾಗುತ್ತದೆ ಎಂದು ರವಿ ರೈ ಪಜೀರು ವಿನಂತಿಸಿದರು. ವಿವಿಧ ಜವಾಬ್ದಾರಿ ಹೊತ್ತ ಮುಖಂಡರು ಹಾಗೂ ಸಭೆಯಲ್ಲಿ ಪಾಲ್ಗೊಂಡ ಭಕ್ತ ಸಮುದಾಯ ಸಲಹೆ ನೀಡಿದರು.
ಸಭೆಯಲ್ಲಿ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ. ಜಿ. ರಾಜಾರಾಮ್ ಭಟ್, ಕಣಂತೂರು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಚೌಟ ಉಳಿಪಾಡಿಗುತ್ತು, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನಿಕಟ ಪೂರ್ವ ಅಧ್ಯಕ್ಷ ಸಂತೋμï ಕುಮಾರ್ ರೈ ಬೋಳಿಯಾರ್, ಪ್ರಧಾನ ಸಂಚಾಲಕ ಜಗದೀಶ್ ಆಳ್ವ ಕುವ್ವೆತ್ತಬೈಲ್ ಹಾಗೂ ನಂದರಾಜ್ ಪಿಜಿನಬೈಲ್, ಕೂಟತ್ತಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಭರತ್ ನಾಯ್ಕ್ ನಚ್ಚಗುತ್ತು, ಕಾರ್ಯಧ್ಯಕ್ಷ ಸತೀಶ್ ಬದಿಯಾರು ಹಾಗೂ ವಿಜೇಶ್ ನಾಯ್ಕ್ ನಾರ್ಯ ನಡಿಗುತ್ತು, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಕುರ್ಮಾನ್, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ, ಅಸೈಗೋಳಿ ಗುಳಿಗ ಕೊರಗಜ್ಜ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವಿ ರೈ ಪಜೀರು,ಅಭಿಯಂತರ ಸುರೇಶ್ ಕೊಂಡೆ ನಾರ್ಯಗುತ್ತು, ಚಂದ್ರಶೇಖರ ಗಟ್ಟಿ ಗುಂಡ್ಯ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಹರೀಶ್ ಶೆಟ್ಟಿ ಪಾವುಲಗುತ್ತು ಉಪಸ್ಥಿತರಿದ್ದರು.