HEALTH TIPS

ಭಾರತದಲ್ಲಿ ಹೊಸ ಕಚೇರಿಗಳನ್ನು ಆರಂಭಿಸಿದ ನೀಲ್ಸನ್

ಬೆಂಗಳೂರು:  ಪ್ರೇಕ್ಷಕ ಮಾಪನ, ಡೇಟಾ ಮತ್ತು ಅನಲಿಟಿಕ್ಸ್‌ನಲ್ಲಿ ಜಾಗತಿಕ ಮುಂದಾಳು ಸಂಸ್ಥೆಯಾದ ನೀಲ್ಸನ್(Nielsen), ಕಾರ್ಯಾಚರಣೆಗಳನ್ನು ವಿಸ್ತರಿಸಲು, ಬೆಳವಣಿಗೆ ಮುನ್ನಡೆಸಲು ಹಾಗೂ ಭಾರತದಲ್ಲಿ ತನ್ನ ತಂತ್ರಜ್ಞಾನ ಆವಿಷ್ಕಾರಗಳ ಮೇಲೆ ನಿರ್ಮಾಣ ಮಾಡುವುದಕ್ಕಾಗಿ ಮುಂಬೈ ಮತ್ತು ಬೆಂಗಳೂರಿನಲ್ಲಿ ತನ್ನ ಹೊಸ ಕಚೇರಿಗಳನ್ನು ಆರಂಭಿಸಿದೆ.

ಪ್ರಮುಖ ಪ್ರದೇಶಗಳಲ್ಲಿ, ಅಂದರೆ, ಮುಂಬೈನ ಗೋರೆಗಾಂವ್ ಹಾಗೂ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸ್ಥಾಪಿತವಾಗಿರುವ ಈ ಚಲನೆಯು, ಈ ಪ್ರದೇಶದಲ್ಲಿ ಅಸ್ತಿತ್ವ ಬಲಪಡಿಸಲು ಹಾಗೂ ವ್ಯಾಪಾರ ಬೆಳವಣಿಗೆಯನ್ನು ಮುನ್ನಡೆಸಿ ಕಾರ್ಯಾಚರಣೆಗಳನ್ನು ವರ್ಧಿಸಬೇಕೆನ್ನುವ ಸಂಸ್ಥೆಯ ವಿಶಾಲ ದೂರದೃಷ್ಟಿಯ ಭಾಗವಾಗಿದೆ.

ಪ್ರತಿಯೊಂದು ಕಚೇರಿಯಲ್ಲಿ 1,500 ಉದ್ಯೋಗಿಗಳಿಗೆ ಸ್ಥಳಾವಕಾಶವಿದ್ದು, ತಂಡಕೆಲಸಕ್ಕೆ ಬೆಂಬಲ ನೀಡುವ ಕಾರ್ಯಕ್ಷೇತ್ರವನ್ನು ಒದಗಿಸುವುದರ ಜೊತೆಗೆ, ಉದ್ಯೋಗಿಗಳು ಪರಿಕಲ್ಪನೆಗಳನ್ನು ಹಂಚಿಕೊಳ್ಳಲು, ಪ್ರಯೋಗ ನಡೆಸಲು ಮತ್ತು ಆವಿಷ್ಕಾರವನ್ನು ಮುನ್ನಡೆಸಲು ಅವಕಾಶ ಒದಗಿಸುತ್ತವೆ.

ನೀಲ್ಸನ್‌ನ ಸಿಇಒ ಕಾರ್ತಿಕ್ ರಾವ್, “ನೀಲ್ಸನ್‌ಗೆ ಭಾರತವು ಒಂದು ಪ್ರಮುಖ ಮಾರುಕಟ್ಟೆಯಾಗಿದ್ದು, ನಮ್ಮ ಜಾಗತಿಕ ಬೆಳವಣಿಗೆ ಹಾಗೂ ಆವಿಷ್ಕಾರ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ನಮ್ಮ ಅಸ್ತಿತ್ವವನ್ನು ವಿಸ್ತರಿಸುವ ಸಂದರ್ಭದಲ್ಲಿ, ನಾವು ಕೇವಲ ಹೊಸ ಕಚೇರಿಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಿಲ್ಲ, ಬದಲಿಗೆ, ಉದ್ದಿಮೆಯಾದ್ಯಂತ ನಮ್ಮ ಸಹಯೋಗಗಳನ್ನೂ ಆಳಗೊಳಿಸಿಕೊಳ್ಳುತ್ತಿದ್ದೇವೆ." ಎಂದು ಹೇಳಿದರು.

ಗುರುಗ್ರಾಮ ಮತ್ತು ಹೈದರಾಬಾದ್‌ನಂತಹ ಪ್ರದೇಶಗಳು ಒಳಗೊಂಡಂತೆ, ಭಾರತದಾದ್ಯಂತ ಹೆಚ್ಚಿನ ಕಚೇರಿಗಳನ್ನು ನೀಲ್ಸನ್ ತೆರೆಯಲಿದೆ. ಭಾರತದ ತಂತ್ರಜ್ಞಾನ ಮತ್ತು ಅನಲಿಟಿಕ್ಸ್ ಪರಿಸರವ್ಯವಸ್ಥೆಗೆ ತನ್ನ ಬದ್ಧತೆಯ ಭಾಗವಾಗಿ ನೀಲ್ಸನ್ ಇತ್ತೀಚೆಗೆ, ವಿಶ್ವ ಆರ್ಥಿಕ ಸಮಾವೇಶ (World Economic Forum)2025 ನಲ್ಲಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಏರ್ಪಡಿಸಿಕೊಂಡಿದೆ. ಈ ಒಪ್ಪಂದವು, ರಾಜ್ಯದ IT ಮತ್ತು ITeS ಕ್ಷೇತ್ರದೊಳಕ್ಕೆ ₹450 ಕೋಟಿ ಹೂಡಿಕೆಗೆ ಕಾರಣವಾಗಿ, 1,100 ಹೊಸ ಉದ್ಯೋಗಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ, AI ತಜ್ಞರು, ಡೇಟಾ ವಿಜ್ಞಾನಿಗಳು, ಡೇಟಾ ವಿಶ್ಲೇಷಕರು ಮತ್ತು ಇತರ ವಿಶೇಷ ತಂತ್ರಜ್ಞಾನ ಸ್ಥಾನಗಳು ಮುಂತಾದ ತಾಂತ್ರಿಕ ಪಾತ್ರಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಹೆಚ್ಚುವರಿಯಾಗಿ, ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ಗೆ ಪೂರ್ವಭಾವಿಯಾಗಿ, ನೀಲ್ಸನ್ ತನ್ನ OTT ವೇದಿಕೆ- JioHotstar ಗಾಗಿ ಅತ್ಯಾಧುನಿಕ ಅನಲಿಟಿಕ್ಸ್ ಪರಿಹಾರಗಳನ್ನು ಒದಗಿಸುವುದಕ್ಕಾಗಿ JioStarನೊಂದಿಗೆ ಸಹಯೋಗ ಏರ್ಪಡಿಸಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries