ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಮಲ್ಲ ಕ್ಷೇತ್ರದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಭಾನುವಾರ ನಡೆಯಿತು. ಶಶಿಧರ ಭಟ್ ಆನೆಮಜಲು ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀಧರ ಭಟ್ ಆನೆಮಜಲು, ಅಧ್ಯಕ್ಷರಾಗಿ ವಕೀಲ ಶಶಿಧರ ಭಟ್ ಆನೆಮಜಲು, ಉಪಾಧ್ಯಕ್ಷರಾಗಿ ಅಪ್ಪಯ್ಯ ಮಣಿಯಾಣಿ, ಗಂಗಾಧರ ಮಣಿಯಾಣಿ, ಜಗನ್ನಾಥ ಮಲ್ಲ , ಗಂಗಾಧರ ಮೇಲಡುಕ್ಕ, ಜಯರಾಮ ಮಲ್ಲ, ಕಾರ್ಯದರ್ಶಿಯಾಗಿ ರಾಜೇಶ್ ಮಲ್ಲ, ಜೊತೆ ಕಾರ್ಯದರ್ಶಿಯಾಗಿ ಶಶಿಧರ ಮಲ್ಲ, ಸೀತಾರಾಮ ಮಲ್ಲ, ಯತೀಶ್ ಮಲ್ಲ, ಮುರಳಿಕೃಷ್ಣ, ಕೋಶಾಧಿಕಾರಿಯಾಗಿ ಸರಿತಾ ಶಿವನ್, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಹೇಮಾ ಮಾಲಿಂಗ ಆನೆಮಜಲು, ಉಪಾಧ್ಯಕ್ಷೆಯಾಗಿ ಸೌಮ್ಯ ರೋಹಿತ್, ದಿವ್ಯಾ ಮಾಲಿಂಗ ಮತ್ತು ಇತರ ಸದಸ್ಯರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು. ಅಪ್ಪಯ್ಯ ಮಣಿಯಾಣಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಶ್ ಮಲ್ಲ ವಂದಿಸಿದರು.