ಕಾಸರಗೋಡು : ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು, ವರ್ಷಗಳ ಹಿಂದೆ ನಿವೃತ್ತರಾದ ಕೂಡ್ಲು ಮಹಾಬಲ ಶೆಟ್ಟಿ ಅವರನ್ನು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸನ್ಮಾನಿಸಿದರು.
ಮಂಗಳೂರಿನಲ್ಲಿ ಅಂಚೆ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಮಹಾಬಲ ಶೆಟ್ಟಿ ಅವರು ಸೇವೆಯಲ್ಲಿದ್ದಾಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಸ್ಕಸ್ ಮತ್ತು ಶೋಟ್ ಪುಟ್ ಸ್ಪರ್ಧೆಗಳಲ್ಲಿಹಲವು ಬಹುಮಾನಗಳನ್ನು ಪಡೆದು ಅಂಚೆ ಇಲಾಖೆಗೆ ಖ್ಯಾತಿಯನ್ನು ತಂದು ಕೊಟ್ಟಿದ್ದು, ಕ್ರೀಡಾ ರಂಗಕ್ಕೆ ಇವರು ಸಲ್ಲಿಸಿದ ಜೀವಮಾನ ಸಾಧನೆಗಾಗಿ ಕೊಟ್ಟಾರ -ಕೊಡಿಕ್ಕಲ್ ಬಂಟರ ಸಂಘದ ವತಿಯಿಂದ ಇವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಕೊಟ್ಟಾರ ಕೊಡಿಕ್ಕಲ್ ಬಂಟರ ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಕಾಸರಗೋಡಿನ ಪ್ರತಿಷ್ಟಿತ ಸುಮನ್ ಸ್ಪೋಟ್ರ್ಸ್ ಕ್ಲಬ್ಬಿನ ಸಕ್ರಿಯ ಸದಸ್ಯರಾಗಿದ್ದ ಅವರು ಕಬಡ್ಡಿ ಮತ್ತು ವಾಲಿಬಾಲ್ ನಲ್ಲಿಯೂ ವಿಶೇಷ ಪರಿಣತಿ ಹೊಂದಿದ್ದು ಕಾಸರಗೋಡಿನಲ್ಲಿ ನಡೆಯುತ್ತಿದ್ದ ಹಲವು ಪ್ರತಿಷ್ಠಿತ ಕಬಡ್ಡಿ, ವಾಲಿಬಾಲ್ ಪಂದ್ಯಾಟಗಳಲ್ಲಿ 60ರಿಂದ 70ರ ದಶಕಗಳಲ್ಲಿ ಕಾಸರಗೋಡಿನ ಸುಮನ್ ತಂಡವನ್ನು ಪ್ರತಿನಿಧಿಸಿ ಖ್ಯಾತ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರನೆಂಬ ಖ್ಯಾತಿಗೂ ಪಾತ್ರರಾಗಿದ್ದರು.