ಕುಂಬಳೆ: ಮಹಿಳೆಯರು ದೇಶೀಯವಾಗಿ ಮತ್ತು ಜಾಗತಿಕವಾಗಿ ವಿಜ್ಞಾನ, ತಂತ್ರಜ್ಞಾನ, ರಾಜಕೀಯ ಮತ್ತು ಅರ್ಥಶಾಸ್ತ್ರ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಸಾಧಿಸಿದ್ದಾರೆ. ಅದೇರೀತಿಯಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಈ ದಿನವು ಅಕಾಡಮಿ ಗುರಿತಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ಡಾ ಸುಪ್ರಿಯಾ ಹೇಳಿದರು.
ಅವರು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ವತಿಯಿಂದ ಹಲವು ವರ್ಷಗಳಿಂದ ಬಡ ರೋಗಿಗಳ ಆರೈಕೆ ಮತ್ತು ಶುಶ್ರೂಷೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಹಲವಾರು ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಸೂಕ್ತ ಔಷಧಿಗಳನ್ನಿತ್ತು ರೋಗ ಮುಕ್ತರನ್ನಾಗಿಸಿದ ನಾಟಿ ವೈದ್ಯಯಾಗಿ ಸಾಮಾಜಿಕ ಸಾಂಸ್ಕೃತಿಕ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಕಲಾಪೆÇೀಷಕರಾಗಿ ಹರಿಕಥೆ ಭಜನೆ ಯಕ್ಷಗಾನ ಮೊದಲಾದ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹಕರಾಗಿರುವ ಯಮುನಾ ಎಸ್ ಶೆಟ್ಟಿ ಕುದ್ರೆಪ್ಪಾಡಿಗುತ್ತು ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ಯೋಗ ಪೋರ್ ಕಿಡ್ಸ್ ಕಾಸರಗೋಡು ಇವರ ಸಹಕಾರದೊಂದಿಗೆ ಗೌರವಿಸಿ ಮಾತನಾಡುತ್ತಿದ್ದರು.
ಅಕಾಡಮಿಯ ಮಹಿಳಾ ಘಟಕದ ತೇಜಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಿವ್ಯ, ಯಮುನಾ ಹಾಗೂ ಯೋಗ ಫೆÇೀರ್ ಕಿಡ್ಸ್ ನ ಮಕ್ಕಳು ಉಪಸ್ಥಿತರಿದ್ದರು. ಮಮತಾ ಸ್ವಾಗತಿಸಿ ದಿವ್ಯ ವಂದಿಸಿದರು.