ಕೊಚ್ಚಿ: ಕೇರಳ ಹೈಕೋರ್ಟ್ ಕೊಠಡಿಯಲ್ಲಿ ನ್ಯಾಯಮೂರ್ತಿ ಎ ಬದರುದ್ದೀನ್ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ವಕೀಲರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನ್ಯಾಯಮೂರ್ತಿ ಬದರುದ್ದೀನ್ ಕ್ಷಮೆಯಾಚಿಸದಿದ್ದರೆ, ವಕೀಲರ ಸಂಘವು ಸಾಮಾನ್ಯ ಸಭೆ ನಡೆಸಿ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವುದಾಗಿ ವಕೀಲರು ಎಚ್ಚರಿಸಿದ್ದಾರೆ. ನ್ಯಾಯಮೂರ್ತಿ ಬದರುದ್ದೀನ್ ಅವರು ಕೊಠಡಿಯಲ್ಲಿ ಕ್ಷಮೆಯಾಚಿಸುವುದಾಗಿ ಹೇಳಿದರು.
ಆದರೆ, ವಕೀಲರ ಸಂಘವು ಮುಕ್ತ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಪತಿಯ ಮರಣದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದುವರಿಸಲು ಸಮಯಾವಕಾಶ ನೀಡುವಂತೆ ವಕೀಲರು ಕೋರಿದ್ದು ನ್ಯಾಯಮೂರ್ತಿ ಬದರುದ್ದೀನ್ ಅವರನ್ನು ಕೆರಳಿಸಿತು. ಬಳಿಕ ಅವಹೇಳನಗೈದರೆಂದು ದೂರಲಾಗಿದೆ.