ಪೆರ್ಲ: ಎಣ್ಮಕಜೆ ಪಂಚಾಯಿತಿ ಕುರಡ್ಕದ ಕೆ.ಪಿ ಮದನ್ ಮಾಸ್ಟರ್ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಸಮಿತಿ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಗ್ರಂಥಾಲಯ ವಠಾರದಲ್ಲಿ ಜರುಗಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯೆ ಸೌದಾಬಿ ಹನೀಫ್ ಸಮಾರಂಭ ಉದ್ಘಾಟಿಸಿದರು. ಗ್ರಂಥಾಲಯ ಸಮಿತಿ ಅಧ್ಯಕ್ಷ ಹರೀಶ್ ಸೇರಾಜೆ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಇಲಾಖೆ ಸಇವಿಲ್ ಎಕ್ಸೈಸ್ ಅಧಿಕಾರಿ ಜನಾರ್ದನ್ ನಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ತರಗತಿ ನಡೆಸಿದರು. ಕುರಡ್ಕ ಮಸೀದಿಯ ಸಿರಾಜುದ್ದೀನ್ ಹಿಮಾಮಿ, ವಿನೋದ್ ಪೆರ್ಲ, ಹಮೀದ್‍ಹಾಜಿ ನಡುಬೈಲ್, ಜನಾರ್ದನ ಮಾಸ್ಟರ್, ಸಾದಿಕ್ ಮುಬಾಸ್, ಪುರುಷೋತ್ತಮ ಬಜಕೂಡ್ಲು, ಕೆ. ಮಹಮ್ಮದ್ ಕುರಡ್ಕ, ಲತೀಫ್ ಖಂಡಿಗೆ, ಗಣೇಶ ಮಾಸ್ಟರ್ ಖಂಡಿಗೆ, ರಾಮಕೃಷ್ಣ ರೈ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಗ್ರಂಥಾಲಯ ಸಮಿತಿ ಸದಸ್ಯ ಸುಧಾಕರ ಮಾಸ್ಟರ್ ಹಸಿರು ಗ್ರಂಥಾಲಯ ಘೋಷಣೆ ನಡೆಸಿದರು. ತಾಲೂಕು ಗ್ರಂಥಾಲಯ ಸಮಿತಿ ವತಿಯಿಂದ ಮಂಜೂರಾಗಿ ಲಭಿಸಿದ ಧ್ವನಿವರ್ಧಕವನ್ನು ಕುರಡ್ಕ ಗ್ರಂಥಾಲಯಕ್ಕೆ ಕಮಲಾಕ್ಷ ಚಿಗುರುಪಾದೆ ಅವರು ಹಸ್ತಾಂತರಿಸಿದರು. ಸಲಾಲುದ್ದೀನ್ ಮಾಸ್ಟರ್ ಸ್ವಾಗತಿಸಿದರು.
ಈ ಸಂದರ್ಭ ಕುರಡ್ಕಕ್ಕೆ ಗ್ರಾಮ ಪಂಚಾಯಿತಿ ವತಿಯಿಮದ ಮಂಜೂರಾಗಿ ಲಭಿಸಿದ ಹೈಮಾಸ್ಟ್ ದೀಪವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸಿದರು. ಗ್ರಂಥಾಲಯ ಸಮಿತಿ ವತಿಯಿಂದ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು.