ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ ನಡೆಯಿತು. ವಾರ್ಡ್ ಸದಸ್ಯ ರಾಮಚಂದ್ರ ಎಂ.ಕಾರ್ಯಕ್ರಮ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಾರ್ತಿಕ್ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಮಾತೃ ಸಂಘದ ಅಧ್ಯಕ್ಷೆ ಗಾಯತ್ರಿ ಮೊಗೇರು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಗೀತಾಕುಮಾರಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ವೆಂಕಟವಿದ್ಯಾಸಾಗರ್ ವಂದಿಸಿದರು.
7ನೇ ತರಗತಿ ವಿದ್ಯಾರ್ಥಿಗಳಾದ ದೇವಿಪ್ರಣಾಮ್ ಹಾಗೂ ವೈಷ್ಣವ್ ರೈ ನಿರೂಪಿಸಿದರು. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ವಿವಿಧ ಆಶಯಗಳನ್ನು ಚಟುವಟಿಕೆಗಳ ಮೂಲಕ ಪ್ರದರ್ಶಿಸಿದರು. ಪ್ರತಿ ತರಗತಿಯಲ್ಲಿ ಆಯ್ಕೆಯಾದ ವಿವಿಧ ಚಟುವಟಿಕೆಗಳ ಪ್ರದರ್ಶನ, 4ನೇ ತರಗತಿ ವಿದ್ಯಾರ್ಥಿ ರಚನ್ ತಯಾರಿಸಿದ ವಕಿರ್ಂಗ್ ಮಾಡೆಲ್ ಗಳ ಪ್ರದರ್ಶನ ನಡೆಯಿತು.