ಬೇಸಿಗೆಯಲ್ಲಿ ತಿನ್ನಲೇಬೇಕಾದ ತರಕಾರಿಗಳಲ್ಲೊಂದು ನುಗ್ಗೆಕಾಯಿ, ಏಪ್ರಲ್-ಮೇ ತಿಂಗಳಿನಲ್ಲಿ ನಗ್ಗೆಕಾಯಿ ತುಂಬಾನೇ ದೊರೆಯುತ್ತದೆ . ಸಾಂಬಾರ್ ಮಾಡುವಾಗ ಸ್ವಲ್ಪ ನುಗ್ಗೆಕಾಯೊ ಸೇರಿಸಿದರೆ ಅದರ ರುಚಿನೇ ಅಷ್ಟೊಂದು ಸೂಪರ್ ಆಗಿರುತ್ತದೆ. ನುಗ್ಗೆಕಾಯಿ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಔಷಧೀಯ ಗುಣಗಳಿರುವುದರಿಂದ ಔಷಧಿಯನ್ನಾಗಿ ಕೂಡ ಬಳಸಲಾಗುವುದು. ಈಗಂತೂ ನುಗ್ಗೆಕಾಯಿ ಪೌಡರ್, ಅದರ ಎಲೆಯ ಪೌಡರ್ ಎಲ್ಲಾ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನುಗ್ಗೆಕಾಯಿ ತಿನ್ನುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ:
ನುಗ್ಗೆಕಾಯಿಯಲ್ಲಿರುವ ಪೋಷಕಾಂಶಗಳು
ನುಗ್ಗೆಕಾಯಿಯಲ್ಲಿ ವಿಟಮನ್‌ಗಳು, ಖಣಿಜಾಂಶಗಳು, ಬಯೋಆಕ್ಟಿವ್ ಕಾಪೌಂಡ್ ಅಧಿಕವಾಗಿದೆ. ನೀವು 100 ಗ್ರಾಂ ನುಗ್ಗೆಕಾಯಿ ಸೇವನೆ ಮಾಡಿದರೆ
ಅದರಲ್ಲಿ 31ರಷ್ಟು ಕ್ಯಾಲೋರಿ, 2.1 ಗ್ರಾಂ ಪ್ರೊಟೀನ್, 0.2 ಆರೋಗ್ಯಕರ ಕೊಬ್ಬಿನಂಶ, 8.53ಗ್ರಾಂನಷ್ಟು ಕಾರ್ಬೋಹೈಡ್ರೇಟ್ಸ್, 3.2 ಗ್ರಾಂನಷ್ಟು ನಾರಿನಂಶ, 30ಮಿಗ್ರಾಂ ಕ್ಯಾಲ್ಸಿಯಂ, 0.36ಮಿಗ್ರಾಂ ಕಬ್ಬಿಣದಂಶ, 45ಮಿಗ್ರಾಂ ಮೆಗ್ನಿಷ್ಯಿಯಂ 45ಮಿಗ್ರಾಂ, ಪೊಟಾಷ್ಯಿಯಂ 461ಮಿಗ್ರಾಂ, ವಿಟಮಿನ್ ಸಿ 141ಮಿಗ್ರಾಂ, ವಿಟಮಿನ್ ಬಿ8, ಫೋಲೆಟ್ ಇದೆ. ದೇಹಕ್ಕೆ ಅವಶ್ಯಕವಾದ ಪೋಷಕಾಂಶ

ನುಗ್ಗೆಕಾಯಿ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಫ್ಯಾಟಿ ಲಿವರ್ ಸಮಸ್ಯೆ ಕಡಿಮೆ ಮಾಡುವಲ್ಲಿ ತುಂಬಾನೇ ಸಹಕಾರಿಯಾಗಿದೆ.ಇದಲ್ಲಿರುವ antioxidant ಲಿವರ್‌ನಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಅದನ್ನು ನಿಯಂತ್ರಿಸಲು ತುಂಬಾನೇ ಸಹಕಾರಿಯಾಗಿದೆ. ಬಿಪಿ ಸಮಸ್ಯೆ ಇರುವವರು ನುಗ್ಗೆಕಾಯಿ ಸಾಂಬಾರ್ ಹೆಚ್ಚು ಸೇವಿಸಿ, ತುಂಬಾನೇ ಒಳ್ಳೆಯದು.
ಕ್ಯಾನ್ಸರ್ ರೋಗಿಗಳ ಡಯಟ್‌ನಲ್ಲಿ ನುಗ್ಗೆಕಾಯಿ ಸೇರಿಸಿದರೆ ತುಂಬಾನೇ ಒಳ್ಳೆಯದು
ನುಗ್ಗೆಕಾಯಿಯಲ್ಲಿರುವ ಪೋಷಕಾಂಶ ಕ್ಯಾನ್ಸರ್ ರೋಗಿಗಲು ಚೇತರಿಸಿಕೊಳ್ಳಲು ಸಹಕಾರಿ, ಸುಸ್ತು ಮುಂತಾದ ಸಮಸ್ಯೆ ಹೋಗಲಾಡಿಸುತ್ತದೆ. ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಲಿವರ್ ಕ್ಯಾನ್ಸರ್ ಈ ಬಗೆಯ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ನರಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಖಿನ್ನತೆಯಂಥ ಸಮಸ್ಯೆ ತಡೆಗಟ್ಟಲು ಸಹಕಾರಿ
ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ನುಗ್ಗೆಕಾಯಿ ಸೊಪ್ಪಿನ ಪುಡಿ ಬೆಳಗ್ಗೆ ಸೇವಿಸುವುದರಿಂದ
ತೂಕ ಇಳಿಕೆಗೆ ಸಹಕಾರೊ
ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ
ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ, ಇದರಿಂದ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ.
ನುಗ್ಗೆಸೊಪ್ಪು ಪುಡಿ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ.