ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವರಿಗೆ ಮಾ.9 ಆದಿತ್ಯವಾರದಂದು 1008 ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಜರಗಲಿದೆ. ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಸಪ್ತಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. ಬೆಳಗ್ಗೆ ಬಾಲಕೃಷ್ಣ ಆಚಾರ್ಯ ನೀರ್ಚಾಲು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಸಾಹಿತ್ಯ ಗಾನ ನೃತ್ಯ ವೈಭÀವ, ರಾತ್ರಿ ನಾಟ್ಯನಿಲಯ ಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯಾಮೃತಂ ಪ್ರದರ್ಶನಗೊಂಡಿತು.
ಇಂದು ಬ್ರಹ್ಮಕಲಶ ಪೂಜೆ :
ಮಾ.8 ಶನಿವಾರದಂದು ಬೆಳಗ್ಗೆ 6ರಿಂದ ಗಣಪತಿ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಅಂಕುರ ಪೂಜೆ, ಸೋಪಾನ ಪೂಜೆ, ಬ್ರಹ್ಮಕಲಶ ಪೂಜೆ ನಡೆಯಲಿದೆ. ರಾತ್ರಿ 6ರಿಂದ ಪರಿಕಲಶ ಪೂಜೆ, ಅವಾಸ ಹೋಮ, ಅವಾಸ ಬಲಿ, ಕಲಶಾವಾಸ, ಸೋಪಾನ ಪೂಜೆ, ಮಹಾಬಲಿ ಪೀಠಾವಾಸ ನಡೆಯಲಿದೆ. ಬೆಳಗ್ಗೆ 10 ಕ್ಕೆ ಸುರೇಶ್ ಕಂಬಾರು ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 11.30ರಿಂದ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಶಿಷ್ಯವೃಂದದವರಿಂದ ವಯಲಿನ್. 1.30ಕ್ಕೆ ವಿದುಷಿ ರಾಧಾ ಮುರಳೀದರ್ ಕಾಸರಗೋಡು ಮತ್ತು ಬಳಗದ ಕರ್ನಾಟಕ ಶಾಸ್ತ್ರೀಯ ಸಂಗೀತ, 3.30ಕ್ಕೆ ವಿದುಷಿ ಸರಸ್ವತಿಕೃಷ್ಣನ್ ಬೇಳ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ 5ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಅದಮಾರು ಮಠ ಉಡುಪಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯನ್ನು ಉದ್ಯಮಿ ಬಿ.ವಸಂತ ಪೈ ಬದಿಯಡ್ಕ ಉದ್ಘಾಟಿಸಲಿದ್ದಾರೆ. ಉದ್ಯಮಿ ಸುಬ್ರಹ್ಮಣ್ಯ ಭಟ್ ಕಾಟಿಪಳ್ಳ ಅಧ್ಯಕ್ಷತೆ ವಹಿಸುವರು. ರಾತ್ರಿ 7.30ರಿಂದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ಶ್ರೀರಾಮ ಪುನರಾಗಮನ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.