ತಿರುವನಂತಪುರಂ: ದೇಹದಾರ್ಢ್ಯ ಪಟುಗಳಿಗೆ ಪೊಲೀಸ್ ಹುದ್ದೆಗೆ ನೇಮಕಗೊಳಿಸಲು ರಾಜ್ಯ ಸರ್ಕಾರ ಮಾಡಿದ್ದ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಕೇರಳ ಆಡಳಿತ ನ್ಯಾಯಮಂಡಳಿ ಈ ತೀರ್ಪು ನೀಡಿದೆ. ಶಿನು ಚೋವ್ವಾ, ಚಿತ್ತರೇಶ್ ಮತ್ತು ನಟೇಶನ್ ಅವರನ್ನು ಪೊಲೀಸ್ ಪಡೆಗೆ ನೇಮಕ ಮಾಡಿಕೊಳ್ಳುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧದ ಅರ್ಜಿಗೆ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದೆ. ನೇಮಕಗೊಂಡ ಬಾಡಿಬಿಲ್ಡರ್‌ಗಳಲ್ಲಿ ಒಬ್ಬರು ಪೊಲೀಸ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಮತ್ತಿಬ್ಬರು ಭಾಗವಹಿಸಿರಲಿಲ್ಲ. ಆದರೂ ಅವರಿಬ್ಬರನ್ನೂ ಕ್ರೀಡಾಪಟುಗಳ ವಿಭಾಗದಲ್ಲಿ ಪೊಲೀಸ್ ಪಡೆಗೆ ನೇಮಿಸಿದ್ದು ದೊಡ್ಡ ವಿವಾದವಾಗಿತ್ತು.
ಬಾಡಿಬಿಲ್ಡರ್‌ಗಳನ್ನು ಪೊಲೀಸ್ ಪಡೆಗೆ ನೇಮಕಾತಿ ಹುನ್ನಾರಕ್ಕೆ ತಡೆ ನೀಡಿದ ಆಡಳಿತ ನ್ಯಾಯಮಂಡಳಿ
0
ಮಾರ್ಚ್ 05, 2025
Tags