HEALTH TIPS

ಮಣಿಪುರದಲ್ಲಿ ಮತ್ತೆ ಗಲಭೆ: ಕಚೇರಿ, ಶಾಲೆಗಳಲ್ಲಿಲ್ಲ ಹಾಜರಾತಿ; ರಸ್ತೆಗಳು ಬಣಬಣ

ಇಂಫಾಲ್‌: ಹ್ಮಾರ್‌ ಮತ್ತು ಝೊಮಿ ಬುಡಕಟ್ಟು ಸಮುದಾಯದ ನಡುವೆ ಸಂಘರ್ಷದಿಂದಾಗಿ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಬುಗಿಲೆದ್ದಿದೆ. ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯದ ಚುರಚಾಂದಪುರ ಜಿಲ್ಲೆಯಲ್ಲಿ ಸಂಭವಿಸಿದ ಈ ಘಟನೆಯ ನಂತರ ಕರ್ಫ್ಯೂ ವಿಧಿಸಲಾಗಿದೆ.

ಇದರಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ. ಶಾಲೆ ಮತ್ತು ಕಚೇರಿಗಳಲ್ಲಿ ಹಾಜರಾತಿ ಕಡಿಮೆ ದಾಖಲಾಗಿದೆ. ರಾಜ್ಯದಲ್ಲಿ ಹಿಂಸಾಚಾರ ಮತ್ತೆ ಬುಗಿಲೇಳದಂತೆ ಭದ್ರತಾ ಸಿಬ್ಬಂದಿ ಬುಧವಾರ ರಾತ್ರಿ ಧ್ವಜ ಮೆರವಣಿಗೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಸಂಭವಿಸಿದ ಗಲಭೆ ನಿಯಂತ್ರಣಕ್ಕೆ ಬರುವ ಹೊತ್ತಿಗೆ, ಹ್ಮಾರ್‌ ಪ್ರಧಾನ ಕಾರ್ಯದರ್ಶಿ ರಿಚರ್ಡ್ ಹ್ಮಾರ್‌ ಅವರ ಮೇಲೆ ಝೊಮಿ ಸಮುದಾಯದ ಕೆಲವರು ಭಾನುವಾರ ಹಲ್ಲೆ ನಡೆಸಿದ್ದರು. ಇದರಿಂದ ರಾಜ್ಯದಲ್ಲಿ ಮತ್ತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಮಂಗಳವಾರ ರಾತ್ರಿ ಸಂಭವಿಸಿದ ಗಲಭೆಯಲ್ಲಿ ಹ್ಮಾರ್ ಸಮುದಾಯದ 51 ವರ್ಷದ ಲಾಲ್ರೊಪು ಪಖಾಂಗ್ತೆ ಎಂಬುವವರು ಮೃತಪಟ್ಟಿದ್ದಾರೆ. ಇವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಕುಕಿ ಸಮುದಾಯದ ಹಲವರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಚುರಚಾಂದಪುರ ಪಟ್ಟಣವು ಝೊಮಿ ಸಮುದಾಯದ ಮುಖ್ಯ ಕೇಂದ್ರವಾಗಿದೆ. ಹ್ಮಾರ್ ಮತ್ತು ಕುಕಿ ಸಮುದಾಯಗಳೂ ಇದೇ ಪ್ರದೇಶದಲ್ಲಿವೆ.

ಚುರಚಾಂದಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕರೆ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿದೆ. ಶಾಸಕರು ಮತ್ತು ಬುಡಕಟ್ಟು ಸಮುದಾಯದ ಸಂಘಟನೆಗಳು ಶಾಂತಿ ಸ್ಥಾಪನೆಗೆ ಮನವಿ ಮಾಡಿಕೊಂಡಿವೆ.

2023ರ ಮೇಯಿಂದ ಮಣಿಪುರದಲ್ಲಿ ಸಂಭವಿಸಿದ ಗಲಭೆಯಿಂದಾಗಿ ಸುಮಾರು 250 ಜನ ಮೃತಪಟ್ಟಿದ್ದಾರೆ. ಹಲವರು ನಿರ್ವಸತಿಗರಾಗಿದ್ದಾರೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಫೆ. 13ರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ರಾಜ್ಯ ಸರ್ಕಾರದ ಅವಧಿ 2027ರವರೆಗೂ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries