ಚಂಡೀಗಢ: 'ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಘೋಷಿತ ಕ್ರೈಸ್ತ ಧರ್ಮ ಪ್ರಚಾರಕ ಬಜೀಂದರ್ ಸಿಂಗ್ ವಿರುದ್ಧ ತನಿಖೆ ಮುಂದುವರಿಸಲಾಗಿದೆ' ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
42 ವರ್ಷದ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 22 ವರ್ಷದ ಯುವತಿ ಫೆ.28ರಂದು ದೂರು ದಾಖಲಿಸಿದ್ದರು.
'ತನಿಖೆಯು ಪ್ರಗತಿಯಲ್ಲಿದೆ' ಎಂದು ಕಪುರ್ತಾಲಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ತೂರಾ ತಿಳಿಸಿದರು.
ಸಿಂಗ್ ಅವರ ಯೂಟ್ಯೂಬ್ ಚಾನಲ್ ಪ್ರಕಾರ ಇದೇ ಮಾರ್ಚ್ 5 ಹಾಗೂ 6ರಂದು ನೇಪಾಳದಲ್ಲಿ 'ದುಃಖ್ ನಿವಾರಣ ಸತ್ಸಂಗ್' ಆಯೋಜಿಸಿದ್ದು, ಅದರಲ್ಲಿ ಭಾಗವಹಿಸಲು ತೆರಳಿದ್ದರು.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ನ 354ಎ (ಲೈಂಗಿಕ ಕಿರುಕುಳ), 354ಡಿ (ಹಿಂಬಾಲಿಸುವುದು), 506 (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಪೋಷಕರ ಜೊತೆ ಚರ್ಚ್‌ಗೆ ತೆರಳುತ್ತಿದ್ದ ಯುವತಿಯನ್ನು ಕೊಠಡಿಗೆ ಕರೆಸಿಕೊಂಡಿದ್ದ ಧರ್ಮ ಪ್ರಚಾರಕ ಬಜೀಂದರ್ ಸಿಂಗ್, ಆಕೆಯನ್ನು ತಬ್ಬಿ ಕಿರುಕುಳ ನೀಡಿದ್ದರು. ಈ ಕುರಿತು ದೂರು ನೀಡಿದರೆ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.