ಕೀವ್: ಉಕ್ರೇನ್‌ನ ಬಂದರು ನಗರ ಒಡೆಸಾದ ಮೇಲೆ ರಷ್ಯಾ ನಡೆಸಿದ ಡ್ರೋನ್‌ಗಳ ದಾಳಿಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಉಕ್ರೇನ್‌ನ ಅಧಿಕಾರಿಗಳು ಹೇಳಿದ್ದಾರೆ.
ಇಂಧನ ಸೌಲಭ್ಯಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಹೇಳಿದ್ದ ರಷ್ಯಾ, ವೈಮಾನಿಕ ದಾಳಿ ಮುಂದುವರಿಸಿದೆ.
ಇದು ರಷ್ಯಾದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಈ ದಾಳಿಯಿಂದಾಗಿ ಒಡೆಸಾ ವಲಯದ ಮೂರು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ಇಂಧನ ಮೂಲಸೌಕರ್ಯಕ್ಕೆ ಹಾನಿ ಆಗಿರುವುದನ್ನು ಸೂಚಿಸುತ್ತದೆ ಎಂದು ಒಡೆಸಾ ವಲಯದ ಮುಖ್ಯಸ್ಥ ಓಲೆಹ್ ಕೈಪರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, 'ರಷ್ಯಾ ವಿರುದ್ಧ ಅಮೆರಿಕ, ಯುರೋಪ್ ಮತ್ತು ಇತರ ನಮ್ಮ ಮಿತ್ರ ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸಿ ಒತ್ತಡ ಹೇರುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದರ ಜತೆಗೆ ನಮಗೆ ಭದ್ರತಾ ಸಹಕಾರದ ಅಗತ್ಯವೂ ಇದೆ' ಎಂದು ಹೇಳಿದ್ದಾರೆ.
ಕುರ್ಸ್ಕ್ ಪ್ರದೇಶದಲ್ಲಿ ಅನಿಲ ಸೌಲಭ್ಯವನ್ನು ಗುರಿಯಾಗಿಸಿ ಉಕ್ರೇನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಇದನ್ನು ಉಕ್ರೇನ್ ನಿರಾಕರಿಸಿದೆ.