ಭೋಪಾಲ್: 'ನಾನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಚಾರ ನಡೆಸಲು ಗುಜರಾತ್‌ನಲ್ಲಿ ಹೋಗಿದ್ದೆ. ಈ ವೇಳೆ 'ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಡಿ. ಯಾಕೆಂದರೆ ಹಿಂದೂಗಳು ಸಿಟ್ಟಾಗುತ್ತಾರೆ' ಎಂದು ನನಗೆ ಹೇಳಲಾಗಿತ್ತು' ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಸೋಮವಾರ ಹೇಳಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, 'ಹೃದಯದಲ್ಲಿ ಕಾಂಗ್ರೆಸ್ ಸಿದ್ಧಾಂತ ಹೊಂದಿರುವವರು ಜನರೊಂದಿಗೆ ನಿಲ್ಲುತ್ತಾರೆ. ಯಾರು ಜನರಿಂದ ದೂರವಿರುತ್ತಾರೊ ಅವರಲ್ಲಿ ಅರ್ಧದಷ್ಟು ಜನರು ಬಿಜೆಪಿಯವರು' ಎಂದಿದ್ದರು.
ರಾಹುಲ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿ ದಿಗ್ವಿಜಯ ಸಿಂಗ್, 'ಕಾಂಗ್ರೆಸ್‌ನಲ್ಲಿರುವ ಬಿಜೆಪಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಅವರನ್ನು ಕಿತ್ತೊಗೆಯಬೇಕು' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.