ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ಕೇಂದ್ರ ಭೂ ಸಾರಿಗೆ-ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭ ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ಚಟ್ಟಂಚಾಲ್ ಸನಿಹದ ಕುಣಿಯದಲ್ಲಿ ಪ್ರತ್ಯೇಕ ಪಾದಚಾರಿ ಸೇತುವೆ, ಉಪ್ಪಳ ಮೇಲ್ಸೇತುವೆಯ ಉದ್ದ ವಿಸ್ತರಣೆ, ಚೆರುಂಬ ಹಾಗೂ ನುಳ್ಳಿಪಾಯಲ್ಲಿ ಕೆಳಸೇತುವೆ, ಶಿರಿಯಾದಲ್ಲಿ ಮೇಲ್ಸೇತುವೆ ಹಾಗೂ ಮುಳಕಲ್ಲಿನಲ್ಲಿ ಪಾದಚಾರಿ ಸೇತುವೆ ನಿರ್ಮಾಣದ ಕುರಿತು ಎಂ.ಎಲ್ ಅಶ್ವಿನಿ ಅವರು ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸುವುದರ ಜತೆಗೆ ಕಾಮಗಾರಿಗಳ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿದರು.