ಕುಂಬಳೆ: ಸರೋವರ ದೇವಾಲಯ, ಕುಂಬಳೆ ಸನಿಹದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಹೊಸದಾಗಿ ನಿರ್ಮಿಸಲಾದ ಅತಿಥಿಗೃಹ'ಅನಂತ ಯಾತ್ರಿ ನಿವಾಸ'ದ ಲೋಕಾರ್ಪಣೆ ಮಾ. 9ರಂದು ಮಧ್ಯಾಹ್ನ 2ಗಂಟೆಗೆ ಜರುಗಲಿದೆ.
ಅನಂತಶ್ರೀ ಸಭಾ ಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಲಯ ಅದ್ಯಕ್ಷ ಕೆ.ವಿ ಸುರೇಂದ್ರನ್ ಉದ್ಘಾಟಿಸುವರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅನುಗ್ರಹ ಭಾಷಣ ಮಡುವರು. ಮುಂಡಪಳ್ಳ ಶ್ರೀ ರಾಜರಾಜೇಶ್ವರ ದೇವಸ್ತನದ ಟ್ರಸ್ಟಿ, ಉದ್ಯಮಿ ಕೆ.ಕೆ ಶೆಟ್ಟಿ, ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ನ ಆಳ್ವ ಮೊದಲಾದವರು ಪಾಲ್ಗೊಳ್ಳುವರು.