ಕೋಲ್ಕತ್ತ: 'ಈಗಿನ ಪರಿಸ್ಥಿತಿಯಲ್ಲಿ ಕೋಲ್ಕತ್ತಕ್ಕೆ ಆಗಾಗ್ಗೆ ಅಲ್ಲಿಗೆ ಭೇಟಿ ನೀಡಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಇನ್ನು ಮುಂದೆಯೂ ಫುಟ್‌ಬಾಲ್‌ನಂತೆ ಒದೆಸಿಕೊಳ್ಳಲು ಬಯಸುವುದಿಲ್ಲ' ಎಂದು ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ತಿಳಿಸಿದ್ದಾರೆ.
'ಪಿಟಿಐ' ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಈ ಕುರಿತು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕೋಲ್ಕತ್ತದ ಜೊತೆ ಗಟ್ಟಿಯಾದ ಬಾಂಧವ್ಯ ಹೊಂದಿದ್ದು, ಸಾಹಿತ್ಯ ಕಾರ್ಯಕ್ರಮ, ಪುಸ್ತಕ ಮೇಳಗಳಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದೇನೆ' ಎಂದು ತಿಳಿಸಿದ್ದಾರೆ.
'2000ರಲ್ಲಿ ಕೋಲ್ಕತ್ತದಿಂದ ಹೊರಹಾಕಲ್ಪಟ್ಟ ತಸ್ಲೀಮಾ ಅವರಿಗೆ ಮರಳಿ ಅಲ್ಲಿಗೆ ಮರಳಲು ಕೇಂದ್ರ ಸರ್ಕಾರ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು' ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ ಅವರು ಈ ವಾರ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ, ತಸ್ಲೀಮಾ ಅವರು ಈ ಹೇಳಿಕೆ ನೀಡಿದ್ದಾರೆ.