ಬದಿಯಡ್ಕ: ಕನ್ನಡಪರ ಹೋರಾಟಗಾರ್ತಿ ನಯನಾ ಗಿರೀಶ್ ಅಡೂರು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಇದರ ವತಿಯಿಂದ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಅಭಿನಂದಿಸಲಾಯಿತು.
ಅಡೂರು ಸರ್ಕಾರೀ ಹೈಸ್ಕೂಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಹುದ್ದೆಗೆ ಕನ್ನಡ ಅರಿಯದ ಮಲಯಾಳ ಶಿಕ್ಷಕಿಯನ್ನು ನೇಮಿಸಿದಾಗ ಮತ್ತು ಅಡೂರು ಕೋರಿಕಂಡ ಅಂಗನವಾಡಿಯ ಕನ್ನಡ ಮಕ್ಕಳಿಗೆ ಮಲಯಾಳಿ ಶಿಕ್ಷಕಿಯ ನೇಮಿಸಿದಾಗ ಇದರ ವಿರುದ್ಧ ವಿವಿಧ ರೀತಿಯಲ್ಲಿ ಹೋರಾಟವನ್ನು ಸಂಘಟಿಸಿ ,ಕೇರಳ ಹೈಕೋರ್ಟಿನಲ್ಲಿ ದಾವೆ ಹೂಡಿ ಕನ್ನಡ ಶಿಕ್ಷಕಿಯರನ್ನು ನೇಮಿಸುವಂತೆ ಆದೇಶ ಪಡೆಯುವಲ್ಲಿ ನಯನಾ ಗಿರೀಶ್ ಅವರು ಹೆಚ್ಚಿನ ಶ್ರಮ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ವಕೀಲ ಥೋಮಸ್ ಡಿ'ಸೋಜ, ಆಯಿಷಾ ಎ ಪೆರ್ಲ, ಡಾ. ಸುಭಾಷ್ ಪಟ್ಟಾಜೆ, ದಿವ್ಯಾಗಟ್ಟಿ ಪರಕ್ಕಿಲ, ಸಮತಾ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಸುಂದರ ಬಾರಡ್ಕ, ರಾಮಪಟ್ಟಾಜೆ, ಕೃಷ್ಣ.ಡಿ, ಉದಯಕುಮಾರ್, ವನಜಾಕ್ಷಿ ಚೆಂಬ್ರಕಾನ,ಸುಭಾಷ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.