ಕಾಸರಗೋಡು: ಸಹಜೀವನ ಸ್ನೇಹಗ್ರಾಮದ ಎರಡನೇ ಹಂತ ಶೀಘ್ರದಲ್ಲೇ ಪ್ರಾರಂಭಿಸಲು ಸಾಮಾಜಿಕ ನ್ಯಾಯ ಸಚಿವೆ ಡಾ. ಆರ್. ಬಿಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎರಡನೇ ಹಂತದಲ್ಲಿ 5 ಕೋಟಿ ರೂ.ಗಳ ನಿರ್ಮಾಣ ಕಾರ್ಯಗಳನ್ನು ಸೇರಿಸಲಾಗಿದೆ. ಸ್ಪೀಚ್ ಥೆರಪಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳು, ಪ್ರಯೋಗಾಲಯಗಳು, 50 ಜನರು ವಾಸಿಸಲು ಯೋಗ್ಯವಾದ ಅಂಗವಿಕಲರ ಆರೈಕೆ ಗೃಹ, ಐ-ಲೀಡ್ ಯೋಜನೆಯ ಸಹಯೋಗದೊಂದಿಗೆ ಅಂಗವಿಕಲರಿಗಾಗಿ ವೃತ್ತಿಪರ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಾಮಾಜಿಕ ನ್ಯಾಯ ಇಲಾಖೆಯ ಜಿಲ್ಲಾ ಮುಖ್ಯಸ್ಥ ಆರ್ಯ ಪಿ ರಾಜ್, ಯು ಎಲ್ ಸಿ ಸಿ ಎಲ್ ಪ್ರತಿನಿಧಿಗಳು, ಮತ್ತು ಸಹಜೀವನ ಸ್ನೇಹಗ್ರಾಮದ ವ್ಯವಸ್ಥಾಪಕ ಪಿ ಸುರೇಶನ್ ಭಾಗವಹಿಸಿದ್ದರ
ಸಜೀವನ ಸ್ನೇಹಗ್ರಾಮಂ ಯೋಜನೆಯ ವಿಧಾನ:
ರಾಜ್ಯ ಸರ್ಕಾರದ ಮಾದರಿ ಯೋಜನೆಯಾಗಿ ಸಾಮಾಜಿಕ ನ್ಯಾಯ ಇಲಾಖೆಯು ಕಲ್ಪಿಸಿರುವ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ 'ಸಹಜೀವನ ಸ್ನೇಹ ಗ್ರಾಮಂ' ನ್ನು ಸಾಮಾಜಿಕ ನ್ಯಾಯ ಮತ್ತು ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅವರು ಫೆಬ್ರವರಿ 29, 2024 ರಂದು ಉದ್ಘಾಟಿಸಿದ್ದರು. ನಾಲ್ಕು ಹಂತಗಳಲ್ಲಿ ಕೈಗೊಳ್ಳಲಾಗುವ ಈ ಯೋಜನೆಯ ಮೊದಲ ಹಂತವನ್ನು ಸಚಿವರು ಉದ್ಘಾಟಿಸಿರುವುದು. ಮೇ 2022 ರಲ್ಲಿ ನಿರ್ಮಾಣ ಪ್ರಾರಂಭವಾದ ಪುನರ್ವಸತಿ ಗ್ರಾಮ ಯೋಜನೆಗೆ 489,52,829 ರೂ.ಗಳ ಆಡಳಿತಾತ್ಮಕ ಅನುಮೋದನೆ ಮತ್ತು 445,00,000 ರೂ.ಗಳ ತಾಂತ್ರಿಕ ಅನುಮೋದನೆ ದೊರೆತಿದೆ. ನಿರ್ಮಾಣ ಕಾರ್ಯವನ್ನು ಉರಾಲುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರಿ ಸಂಘವು ಕೈಗೆತ್ತಿಕೊಂಡು ಪೂರ್ಣಗೊಳಿಸಿರುವುದು.
ಸರ್ಕಾರ ಘೋಷಿಸಿದ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮವು ನಾಲ್ಕು ಪ್ರಮುಖ ಭಾಗಗಳು / ಘಟಕಗಳನ್ನು ಒಳಗೊಂಡಿತ್ತು. ಪುನರ್ವಸತಿ ಗ್ರಾಮ ಕಾರ್ಯಕ್ಕಾಗಿ ಸುಮಾರು 58 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಯನ್ನು ನಿಗದಿಪಡಿಸಲಾಗಿತ್ತು. ಈ ಉದ್ದೇಶಕ್ಕಾಗಿ 25 ಎಕರೆ ಭೂಮಿಯನ್ನು ಪಡೆಯಲಾಗಿದೆ.
ಹೈಡ್ರೋಥೆರಪಿ ಇದರ ಮೊದಲ ಹಂತವಾಗಿದೆ, ಕ್ಲಿನಿಕಲ್ ಸೈಕಾಲಜಿ ಬ್ಲಾಕ್‍ಗಳನ್ನು ಕೂಡಾ ಇದು ಒಳಗೊಂಡಿದೆ. ಮೊದಲನೆಯದು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವಿಶೇಷ ಆರೈಕೆ ನೀಡಲು ಒಂದು ಪೆÇೀಷಕ ಸಂರಕ್ಷಣಾ ಗೃಹ. 18-20 ವರ್ಷದೊಳಗಿನ ಅಂಗವಿಕಲ ಮಕ್ಕಳಿಗೆ ಅವರ ಸ್ವಂತ ಕುಟುಂಬಗಳಿಂದ ಆರೈಕೆಯ ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಘಟಕ. ಈ ಪಾಲನಾ ಕೇಂದ್ರದಲ್ಲಿ ಐದು ಮಲಗುವ ಕೋಣೆಗಳನ್ನು ಹೊಂದಿರುವ ನಾಲ್ಕು ವಾರ್ಡ್‍ಗಳು, ಅಂಗವಿಕಲರಿಗೆ ಬಳಸಲು ಸಾಧ್ಯವಿರುವ ರೀತಿಯ ಶೌಚಾಲಯ, ಉದ್ಯಾನ ಇತ್ಯಾದಿಗಳನ್ನು ಪೆÇೀಷಕ ಸಂರಕ್ಷಣಾ ಗೃಹ ಒಳಗೊಂಡಿದೆ.