ರಾಮಗಢ: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಕಾಡಾನೆಗಳ ಹಿಂಡೊಂದು ರೈತರೊಬ್ಬರ ಮೇಲೆ ಬುಧವಾರ ದಾಳಿ ಮಾಡಿದ್ದು, ತುಳಿದು ಸಾಯಿಸಿವೆ.
ರಾಮಗಢ ಜಿಲ್ಲೆಯ ಅರಣ್ಯವೊಂದರಲ್ಲಿ ಈ ಘಟನೆ ಜರುಗಿದೆ. ಮೃತರನ್ನು ಮೇಘನಾಥ ಮುಂಡಾ (30) ಎಂದು ಗುರುತಿಸಲಾಗಿದೆ.
'ರೈತ ಮೇಘನಾಥ ಅವರು ಅರಣ್ಯಕ್ಕೆ ತೆರಳಿದ್ದ ವೇಳೆ, ಕಾಡಾನೆಗಳ ಗುಂಪು ಅವರ ಮೇಲೆ ದಾಳಿ ಮಾಡಿದೆ.
ಘಟನೆ ಜರುಗಿದ ನಂತರ, ಆರು ಆನೆಗಳಿರುವ ಹಿಂಡು ಅರಣ್ಯದಲ್ಲಿ ಪತ್ತೆಯಾಗಿದೆ. ಅರಣ್ಯ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತವು ಈ ಹಿಂಡಿನ ಚಲನವಲನಗಳ ಮೇಲೆ ಕಣ್ಣಿಟ್ಟಿವೆ' ಎಂದು ರಾಮಗಢ ವಿಭಾಗೀಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ.