ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ವಾರ್ಷಿಕ ಕಳಿಯಾಟ ಮಹೋತ್ಸನ ಮಾ.30ರಿಂದ ಏ..6ರ ವರೆಗೆಜರಗಲಿದೆ. 30ರಂದು ಬೆಳಗ್ಗೆ 4ಕ್ಕೆ ಚಪ್ಪರ ಮುಹೂರ್ತ, ರಾತ್ರಿ 10ರಿಂದ ನೂರು ವಿಲ್ಲಾ ತೀಯ ಸಮಾಜದ ಶ್ರೀ ಕ್ಷೇತ್ರದಲ್ಲಿರುವ ಭಂಡಾರ ಸ್ಥಾನದಿಂದ ಭಂಡಾರ ಆಗಮನ, ಮಾ.31ರಂದು ಪೂರ್ವಾಹ್ನ 4ರಿಂದ ಭಗವತಿ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ ಬಲಿ, ಬಿಂಬ ದರ್ಶನದ ಬಳಿಕ ಕಳಿಯಾಟಕ್ಕೆ ಧ್ವಜಾರೋಹಣ ನಡೆಯುವುದು. ಸಂಜೆ 6ರಿಂದ ಪುಳ್ಳಿ ಪೂವಣ್ಣ ದೈವದ ವೆಳ್ಳಾಟಂ, ರಾತ್ರಿ 9ರಿಂದ ಅಣಂಞï ದೈವ, ಪುಳ್ಳಿ ಪೂವಣ್ಣ ದೈವಕೋಲ, ಬಿಲ್ಲಾಪುರತ್ತ್ ಭಗವತಿ ದೈವ ಕೋಲ ಜರಗಲಿದೆ.
ಏ.1ರಂದು ಸಂಜೆ 4ರಿಂದ ಭಗವತಿ ದರ್ಶನ, ಅಡಯಾಳಂ ಚೇರ್ಕಲ್, 7ರಿಂದ ವೀರಪುತ್ರನ್ ದೈವದ ವೆಳ್ಳಾಟಂ, 9ರಿಂದ ಪಳ್ಳಕ್ಕ ನಾಯರ್ ವೆಳ್ಳಾಟಂ, ಮಲಯಾಂ ಚಾಮುಂಡಿ ದೈವದ ಕುಳಿಚಾಟ್ಟಂ, ಪಳ್ಳಕ್ಕಿ ನೈತಿ ದೈವ, ಪಳ್ಳಕ್ಕ ನಾಯರ್ ದೈವ, ಮದಗೇರಿ ದೈವದ ಕೋಲ ಪ್ರದರ್ಶನ ನಡೆಯಲಿದೆ.
ಏ.2ರಂದು ಮೊದಲ ಕಳಿಯಾಟ ಅಂಗವಗಿ ಬೆಳಗ್ಗೆ 8ರಿಂದ ವೀರಪುತ್ರನ್ ದೈವದ ಕೋಲ, 10ರಿಂದ ಮಲಯಾಂ ಚಾಮುಂಡಿ ದೈವ ಕೋಲ, ಸಂಜೆ 4ರಿಂದ ಭಗವತಿ ದರ್ಶನ, ಕೆಂಡಸೇವೆ, ಪುದಿಯ ಭಗವತಿ ತೊಡಂಞಲ್, 7ರಿಂದ ಕರಿವಿಲ್ಲ್ ದೈವ, ಕನ್ನಿಮುರುಗನ್ ವೆಳ್ಳಾಟಂ ನಡೆಯಲಿದೆ.
ಏ.3ರಂದು ನಡು ಕಳಿಯಾಟ ಅಂಗವಾಗಿ ಬೆಳಗ್ಗೆ 8ರಿಂದ ಕನ್ನಿ ಕರುಮಗನ್, ಕರಿವಿಲ್ಲು ದೈವದ ಕೋಲ, 10ರಿಂದ ವೀರಪುತ್ರನ್ ದೈವದ ಕೋಲ, ಸಂಜೆ 3ರಿಂದ ವೇಟಕೊರುಮಗನ್ ದೈವದ ಕೋಲ, ಮಲಯಾಂ ಚಾಮುಂಡಿ ದೈವದ ಕೋಲ ನಡೆಯಲಿದೆ. ರಾತ್ರಿ 9ರಿಂದ ಅಮ್ಮ ಕಲಾವಿದೆರ್ ಕುಡ್ಳ ಅಭಿನಯಿಸುವ 'ಅಮ್ಮೆರ್" ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಏ.4ರಂದು ಬೆಳಗ್ಗೆ 5.30ರಿಂ ಪೀಯಾಯಿ, 6ರಿಂದ ಆಲಿಭೂತ, 10ರಿಂದ ಭಗವತಿ ದರ್ಶನ, ಕೆಂಡಸೇವೆ, ಬಲಿ, ಬಿಂಬದರ್ಶನ, ಪುದಿಯ ಭಗವತಿ, ಕಲಶ ಪ್ರದಕ್ಷಿಣೆ, ವೀರಕಾಳಿ ದೈವದ ತೊಡಂಞಲ್ ಜರಗಲಿದೆ. ಸಂಜೆ 5ರಿಂದ ಬಬ್ಬರಿಯ ದೈವ , ಭಜನೆ, 7ರಿಂದ ವೀರಪುತ್ರನ್ ದೈವದ ವೆಳ್ಳಾಟ, ರಾತ್ರಿ 9.30ರಿಂದ ವೇಟಕ್ಕೊರುಮಗನ್ ದೈವದ ವೆಳ್ಳಾಟ, ಭಗವತಿ ದರ್ಶನ, ಬಿಂಬ ದರ್ಶನ, ಕೆಂಡಸೇವೆ, ಉರುಳುಸೇವೆ, ಮಲಯಾಂ ಚಾಮುಂಡಿ ದೈವದ ಕುಳಿಚಾಟ್ಟ, 11ರಿಂದ ವೀರಪುತ್ರನ್ ದೈವದ ಕೋಲ ಜರಗಲಿದೆ.
ಏ.5ರಂದು ಬೆಳಗ್ಗೆ 6ರಿಂದ ಪಿಯಾಯಿ, ಆಲಿಭೂತ, ಮಲಯಾಂಚಾಮುಂಡಿ ದೈವದ ಕೋಲ, ವೇಟಕೊರುಮಗನ್ ದೈವದಕೋಲ, ಭಗವತಿ ದರ್ಶನ, ಕೆಂಡಸೇವೆ, ವೀರಕಾಳಿ ದೈವದ ಕೋಲ, ಬಿಂಬದರ್ಶನ, ಕಲಶಪ್ರದಕ್ಷಿಣೆ ನಡೆಯಲಿದೆ. ರಾತ್ರಿ 8ರಿಂದ ವೀರಪುತ್ರನ್ ದೈವದ ವೆಳ್ಳಾಟ, ಭಗವತಿ ದರ್ಶನ, ಕೆಂಡಸೇವೆ, ಉರುಳುಸೇವೆ ನಡೆಯಲಿದೆ. 10ರಿಂದ ಪಾಡಾರ್ ಕುಳಂಞರ ಭಗವತಿ, ಮಲಯಾಂ ಚಾಮುಂಡಿ ದೈವದ ಕುಳಿಚ್ಚಾಟ ನಡೆಯಲಿದೆ. 11ರಿಂದ ನೂರುವಿಲ್ಲ ಕುರಿಕ್ಕಳ್ ದೈವದ ಕೋಲ ಜರಗಲಿದೆ.
ಏ.6ರಂದು ಬೆಳಿಗ್ಗೆ 6ರಿಂದ ಪೀಯಾಯಿ ಸಹಿತ ಆಲಿಭೂತ, ಮಲಯಾಂ ಚಾಮುಂಡಿ, ವೀರಪುತ್ರನ್ ದೈವದ ಕೋಲ, ಅಪರಾಹ್ನ ಭಗವತಿ ದರ್ಶನ, ಪಾಡಾರ್ ಕುಳಂಞರ ಭಗವತಿಯ ಹೂಮುಡಿ, ಮಂತ್ರಮೂರ್ತಿ, ಆಲಿಭೂತದೊಂದಿಗೆ ಕಳಿಯಾಟ ಮುಕ್ತಾಯವಾಗಲಿದೆ.