ಕಾಸರಗೋಡು: ಕಾಞಂಗಾಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆಯಲ್ಲಿದ್ದ ತೃತೀಯ ವರ್ಷದ ನಸಿರ್ಂಗ್ ವಿದ್ಯಾರ್ಥಿನಿ ಚೈತನ್ಯ ಕುಮಾರಿ(21) ಮೃತಪಟ್ಟಿದ್ದಾರೆ. 2024 ಡಿ.7ರಂದು ಚೈತನ್ಯಾ ಅವರು ನೇಣುಬಿಗಿದು ಆತ್ಮಹತ್ಯೆಗೆತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ದಕಲಿಸಲಾಗಿತ್ತು. ಮೂರೂವರೆ ತಿಂಗಳ ಬಳಿಕ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ವಾರ್ಡನ್ ನೀಡಿದ ಮಾನಸಿಕ ಕಿರುಕುಳದಿಂದ ಈಕೆ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಸಹಪಾಠಿಗಳು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವಿರುದ್ಧ ಭಾರೀ ಜನಾಂದೋಲನ ನಡೆಸಲಾಗಿತ್ತು. ವಿವಿಧ ವಿದ್ಯರ್ಥಿ ಸಂಘಟನೆಗಳು ಅಸ್ಪತ್ರೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.