ಮುಳ್ಳೇರಿಯ: ಬಂದಡ್ಕ ಬೇತಾಳದಲ್ಲಿ ಇತ್ತೀಚೆಗೆ ಬೆಂಕಿ ತಗುಲಿ ಸಂಪೂರ್ಣ ನಾಶ ಹೊಂದಿದ ಅಂಬಾಕ್ಷಿ ರೈಯವರ ಮನೆಗೆ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ, ವಕೀಲ ಸುಬ್ಬಯ್ಯ ರೈ ಅವರು ಭೇಟಿ ನೀಡಿ ಜಿಲ್ಲಾ ಸಮಿತಿಯ ವತಿಯಿಂದ ಧನಸಹಾಯದ ಚೆಕ್ ವಿತರಿಸಿದರು.
ಜಿಲ್ಲಾ ಕಾಯ9ದರ್ಶಿ ಮೋಹನ್ ರೈ ಜೊತೆ ಕಾರ್ಯದರ್ಶಿ ಕಿರಣಮಾಡ ಆದೂರು, ಜಿಲ್ಲಾ ಸದಸ್ಯ ರವೀಂದ್ರ ರೈ ಬಂದಡ್ಕ, ಕಾಸರಗೋಡು ವಲಯ ಬಂಟರ ಸಂಘದ ಕಾರ್ಯದರ್ಶಿ ರವೀಂದ್ರ ರೈ ಮಲ್ಲಾವರ, ಬಂದಡ್ಕ ಪಂಚಾಯಿತಿ ಬಂಟರ ಸಂಘದ ಅಧ್ಯಕ್ಷ ವೆಂಕಪ್ಪ ರೈ, ಕಾರ್ಯದರ್ಶಿ ಮನೋಹರ ರೈ ಮೊದಲಾದವರು ಉಪಸ್ಥಿತರಿದ್ದರು.