ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದಿನಿಂದ ಆರಂಭಗೊಂಡು 9 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ 6 ರಿಂದ ಗಣಪತಿಹೋಮ ಸಹಿತ ವಿವಿಧ ವಿಧಿವಿಧಾನಗಳು, 9 ರಿಂದ ಕಡೆಂಜಿ ಶ್ರೀಮಹಾವಿಷ್ಣು ಕ್ಷೇತ್ರದಿಂದ ಬದಿಯಡ್ಕ, ನೀರ್ಚಾಲು ದಾರಿಯಾಗಿ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಂಜೆ 4 ಕ್ಕೆ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಸಂಜೆ 6ಕ್ಕೆ ದೇವತಾ ಪ್ರಾರ್ಥನಾದಿ ವಿಧಿಗಳು ನಡೆಯಲಿದೆ. 7 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯಲಲಿ ಮಧುಸೂದನ ಅಯರ್ ಅಧ್ಯಕ್ಷತೆ ವಹಿಸುವರು. ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ರಾತ್ರಿ 9 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.
ನಾಳೆಯ ಕಾರ್ಯಕ್ರಮ:
ಬೆಳಿಗ್ಗೆ 5.30ರಿಂದ ಗಣಪತಿಹೋಮ ಸಹಿತ ವಿವಿಧ ವಿಧಿವಿಧಾನಗಳು, 10 ಕ್ಕೆ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮಿಜೀಗಳ ಆಗಮನ, ಪೂರ್ಣಕುಂಭ ಸ್ವಾಗತ ನಡೆಯಲಿದ್ದು, ಬಳಿಕ ಕುಂಟಾರು ರವೀಶ ತಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುವರು. ಡಿ.ಎನ್.ಮಾನ್ಯ ಕಾರ್ಕಳ ಧಾರ್ಮಿಕ ಭಾಷಣ ಮಾಡುವರು. ತಂತ್ರಿ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಗೌರವ ಉಪಸ್ಥಿತರಿರುವರು. ವಿವಿಧ ವಲಯಗಳ ಪ್ರಮುಖರು ಭಾಗವಜಹಿಸುವರು. ಮಧ್ಯಾಹ್ನ 1.30ರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕರ್ಣಾರ್ಜುನ ಕಾಳಗ ಯಕ್ಷಗಾನ ತಾಳಮದಳೆ ನಡೆಯಲಿದೆ. 4.30ರಿಂದ ಬದಿಯಡ್ಕದ ಮರಾಠಿ ಶಾರದೋತ್ಸವ ಸಮಿತಿಯವರಿಂದ ಕೈಕೊಟ್ಟಿಕಳಿ, 5.45 ರಿಂದ ವಿವಿಧ ವೈದಿಕ ವಿಧಿಗಳು, 6 ರಿಂದ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀಹರಿ ದರ್ಶನ ಪ್ರದರ್ಶನಗೊಳ್ಳಲಿದೆ.