ಪೆರ್ಲ. ಎಣ್ಮಕಜೆ ಗ್ರಾಮ ಪಂಚಾಯತಿಯ 2025 - 26 ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಪಂಚಾಯತಿ ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ ಸೋಮವಾರ ಮಂಡಿಸಿದರು. ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆಎಸ್ ಅಧ್ಯಕ್ಷತೆ ವಹಿಸಿದ್ದರು.
ಸುದೀರ್ಘ ಕಾಲದಿಂದ ಕಾಯುತ್ತಿರುವ ಜನಸಾಮಾನ್ಯರ ಕನಸು ನನಸಾಗುವ ಲೈಫ್ ಭವನ ಪದ್ದತಿ ಆಯ್ಕೆ ಮಾಡಲಾದ ಎಲ್ಲಾ ಕುಟುಂಬಗಳಿಗೂ ವಸತಿ ನಿರ್ಮಾಣವನ್ನು ಪೂರ್ಣಗೊಳಿಸುವ ಮಹತ್ವದ ಘೋಷÀಣೆಯನ್ನು ಬಜೆಟ್ ನಲ್ಲಿ ನೀಡಲಾಗಿದೆ. ಕೃಷಿ ಪ್ರದೇಶಗಳಿಗೆ ದಾಳಿ ಇಡುವ ಕಾಡು ಮೃಗಗಳ ಉಪಟಳವನ್ನು ತಡೆಯಲು ಸೋಲಾರ್ ತಂತಿ ಬೇಲಿಗಳನ್ನು ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲಾ ಮನೆಗಳಿಗೂ ಕುಡಿನೀರು ಸರಬರಾಜು ಯೋಜನೆ, ಪ್ರತಿ ಮನೆಗೂ ಕಂಪೆÇೀಸ್ಟ್ ಅಳವಡಿಕೆ,ಆರೋಗ್ಯ, ಶಿಕ್ಷಣ, ಸಾಮಾಜಿಕ ನೀತಿ, ಕೃಷಿ,ರಸ್ತೆ, ಪರಿಸರ ನೈರ್ಮಲ್ಯ,ದಾರಿದೀಪ ಸೌಕರ್ಯ, ಪಶುಸಂಗೋಪನೆ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗಿರುವ ಶೈಕ್ಷಣಿಕ ಯೋಜನೆಗಳಿಗೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಅಂಗನವಾಡಿಗಳಿಗೆ ಕುಡಿ ನೀರಿನ ವ್ಯವಸ್ಥೆ ಸೋಲಾರ್ ವ್ಯವಸ್ಥೆಯ ಅಳವಡಿಕೆ ಯೋಜನೆಯನ್ನು ಪಂಚಾಯತ್ ಮುಂದಿನ ವರ್ಷ ಕಾರ್ಯಗತಗೊಳಿಸಲಿದೆ.
"ಪ್ರಸ್ತುತ ಪಂಚಾಯತ್ ಆಡಳಿತ ಸಮಿತಿಯ ಕೊನೆಯ ಬಜೆಟ್ ಇದಾಗಿದ್ದು ಪಂಚಾಯಿತಿನ ಅಭಿವೃದ್ಧಿಯಲ್ಲಿ ಮೈಲಿಗಲ್ಲಾಗುವ ವಿವಿಧ ರೀತಿಯ ಯೋಜನೆಯನ್ನು ಬಜೆಟ್ ನಲ್ಲಿ ಒಳಗೊಳಿಸಲಾಗಿದೆ. ಲೈಫ್ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಲಿಸ್ಟ್ ನಲ್ಲಿ ಒಳಪಟ್ಟು ಕಾಯುತ್ತಿರುವ ಸುಮಾರು 700ಕ್ಕೂ ಹೆಚ್ಚು ಆರ್ಹರಾದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡುವುದು ಸಾಮಾನ್ಯ ಜನರ ಕನಸಿನ ನನಸಾಗುವ ಮಹತ್ವದ ಯೋಜನೆಯಾಗಲಿದೆ. ಸೌರ ಶಕ್ತಿ ಸದ್ಬಳಕೆಯ ಯೋಜನೆಯ ಭಾಗವಾಗಿ ಮನೆಗಳಿಗೆ ಸೋಲಾರ್ ಪ್ಯಾನಲ್ ಸ್ಥಾಪನೆಗೆ ಪಂಚಾಯತ್ ಆರ್ಥಿಕ ಸಹಾಯ ನೀಡುವ ಯೋಜನೆಗೂ ಪ್ರಾಧಾನ್ಯತೆ ನೀಡಲಾಗುದು ಎಂದು ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ ಎಸ್ ತಿಳಿಸಿದ್ದಾರೆ.
ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಯಶ್ರೀ ಕುಲಾಲ್, ಬಿ ಎಸ್ ಗಾಂಭೀರ, ಸೌದಾಬಿ ಹನಿಫಾ, ಪಂಚಾಯತಿ ಸದಸ್ಯರುಗಳಾದ ಮಹೇಶ್ ಕುಮಾರ್, ಶಶಿಧರ, ರಾಮಚಂದ್ರ, ನರಸಿಂಹ ಪೂಜಾರಿ, ರೂಪವಾಣಿ ಆರ್ ಭಟ್, ಶ್ರೀ ರಾಧಾಕೃಷ್ಣ ನಾಯಕ್,ಜಹನಾಸ್ ಹಂಸಾರ್, ಕುಸುಮಾವತಿ, ಸರಿನಾ ಮುಸ್ತಫ,ಇಂದಿರ, ಉμÁ, ಆಶಾಲತ, ಪಂಚಾಯತ್ ಕಾರ್ಯದರ್ಶಿ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.