ಬದಿಯಡ್ಕ: ಸ್ವರ್ಗೀಯ ಜಯಕೃಷ್ಣನ್ ಮಾಸ್ತರ್ ಅವರ 25ನೇ ವರ್ಷದ ಬಲಿದಾನ ದಿನ ಪುಣ್ಯಸ್ಮರಣೆ ಹಾಗೂ ಪುಷ್ಪಾರ್ಚನೆ ನೀರ್ಚಾಲು ಸಮೀಪದ ಏಣಿಯರ್ಪು ಹನುಮಾನ್ ನಗರದಲ್ಲಿ ನಡೆಯಿತು.
ಪಂಚಾಯತಿ ಪಶ್ಚಿಮ ವಲಯ ಅಧ್ಯಕ್ಷೆ ಹಾಗೂ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಮೊಳೆಯಾರು, ವಾರ್ಡ್ ಸದಸ್ಯೆ ಸ್ವಪ್ನಾ ಹರೀಶ್, ಬಿಜೆಪಿ ಜಿಲ್ಲಾ ನೇತಾರ ರಾಮಪ್ಪ ಮಂಜೇಶ್ವರ ಅವರು .ಜಯಕೃಷ್ಣನ್ ಮಾಸ್ತರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಅಲ್ಪಸಂಖ್ಯಾತ ಮೋರ್ಚಾ ನೇತಾರ ರೋಮನ್ ಡಿ'ಸೋಜಾ, ಏಣಿಯರ್ಪು ಗ್ರಾಮವಿಕಾಸ ಸಮಿತಿ ಸಂಚಾಲಕ ಪ್ರಕಾಶ ಕುಲಾಲ್, ಮಾಜಿ ಪಂ.ಸದಸ್ಯೆಯರಾದ ಭಾರ್ಗವಿ ಏಣಿಯರ್ಪು, ಪ್ರೇಮ ವಿಷ್ಣುಮೂರ್ತಿ ನಗರ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.