ನವದೆಹಲಿ: ಪ್ರತಿಷ್ಠಿತ 'ದಿ ಮೀಡಿಯಾ ಫೌಂಡೇಷನ್'ನ 'ಚಮೇಲಿ ದೇವಿ ಜೈನ್' ಹೆಸರಿನಲ್ಲಿ ನೀಡುವ ಅತ್ಯುತ್ತಮ ವಾರ್ಷಿಕ ಪತ್ರಕರ್ತೆ ಪ್ರಶಸ್ತಿಗೆ ಜತಿಂದರ್ ಕೌರ್ ತುರ್ ಭಾಜನರಾಗಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ 'ದಿ ಕ್ಯಾರವಾನ್'ನಲ್ಲಿ ಪ್ರಕಟವಾದ ತನಿಖಾ ವರದಿಗಾರಿಕೆಗೆ ಕೌರ್ ತುರ್ ಅವರಿಗೆ ಈ ಪ್ರಶಸ್ತಿ ಸಂದಿದೆ.
ನಿರ್ಭೀತ ಪತ್ರಿಕೋದ್ಯಮಕ್ಕಾಗಿ ಫೌಂಡೇಷನ್ ನೀಡುವ 'ವಿಶ್ವನಾಥ್- ದೆಹಲಿ ಪ್ರೆಸ್ ಅವಾರ್ಡ್' ಅನ್ನು 'ಸ್ಕ್ರಾಲ್'ನ ರೋಕಿಬುಜ್ ಜಮಾನ್ ಹಾಗೂ ಲಿಂಗ ಸೂಕ್ಷ್ಮತೆ ಕುರಿತ ಪತ್ರಿಕೋದ್ಯಮಕ್ಕಾಗಿ ನೀಡುವ 'ಕಮಲಾ ಮಂಕೇಕರ್ ಪ್ರಶಸ್ತಿ'ಯನ್ನು 'ಬೆಹನ್ ಬಾಕ್ಸ್'ನ ಪ್ರಿಯಾಂಕಾ ತುಪೆ ಅವರಿಗೆ ನೀಡಲಾಗಿದೆ.