ಕಾಸರಗೋಡು: ರಾತ್ರಿ ಎದೆಹಾಲುಣಿಸಿ ಮಲಗಿಸಿದ್ದ 51ದಿನ ಪ್ರಾಯದ ಗಂಡುಮಗು ಮೃತಪಟ್ಟಿದೆ. ಮಧೂರು ಜುಮಾಮಸೀದಿ ಸನಿಹದ ಕಲ್ಲಕಟಟ ಹೌಸ್ ನಿವಾಸಿ ಕಬೀರ್-ಸಫೀರನಸ್ವಿ ದಂಪತಿಯ ಗಂಡು ಮಗು ಸಾವನ್ನಪ್ಪಿರುವುದು. ರಾತ್ರಿ ಎದೆಹಾಲು ನೀಡಿ ಮಗುವನ್ನು ಮಲಗಿಸಲಾಗಿದ್ದು, ಬೆಳಗ್ಗೆ ನೋಡುವಾಗ ಮೃತಪಟ್ಟಿತ್ತು. ಮಗುವಿನ ಅಸಹಜ ಸಾವಿನ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.