ಕುಂಬಳೆ: ಬಾಯಾರು ಗ್ರಾಮದ ಧರ್ಮತ್ತಡ್ಕ ಸಮೀಪ ಕರುವಜೆ ಪರಿಸರದಲ್ಲಿ ಶ್ರೀ ರಕ್ತೇಶ್ವರೀ ಬನವಿದ್ದು, ಹಲವಾರು ವರ್ಷಗಳಿಂದ ಜೀರ್ಣಾವಸ್ಥೆಯಲ್ಲಿದ್ದು, ಇದೀಗ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಗಿದೆ. ಪೂರ್ವಭಾವಿಯಾಗಿ ಮಂಗಳವಾರ ಭಗವದ್ಭಕ್ತರ ಸಮಕ್ಷಮದಲ್ಲಿ ಸಾನ್ನಿಧ್ಯಗಳ ಬಾಲಾಲಯ ಪ್ರತಿಷ್ಠೆ ಮತ್ತು ಅನುಜ್ಞಾ ಕಲಶ ಕಾರ್ಯಕ್ರಮ ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ಜರುಗಿತು.