HEALTH TIPS

ಲಷ್ಕರ್ ನಾಯಕ ಹಫೀಜ್ ಸಯೀದ್ ಸಹಚರ ಪಾಕಿಸ್ತಾನದಲ್ಲಿ ಹತ್ಯೆ: ಯಾರು ಈ ಅಬು ಕ್ವತಲ್?

Top Post Ad

Click to join Samarasasudhi Official Whatsapp Group

Qries

ಲಷ್ಕರ್‌-ಎ-ತಯಬಾ (ಎಲ್‌ಇಟಿ) ಸಂಘಟನೆಯ ಪ್ರಮುಖ ನಾಯಕ ಹಾಗೂ ಮೋಸ್ಟ್‌ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಫೈಸಲ್‌ ನದೀಮ್‌ ಅಲಿಯಾಸ್‌ ಅಬು ಕ್ವತಲ್‌, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಝೇಲಂ ಜಿಲ್ಲೆಯ ದಿನಾ ಪ್ರದೇಶದಲ್ಲಿ ಶನಿವಾರ ರಾತ್ರಿ ಹತ್ಯೆಯಾಗಿದ್ದಾನೆ. ಈ ಬಗ್ಗೆ 'ಇಂಡಿಯಾ ಟುಡೇ' ವರದಿ ಮಾಡಿದೆ.

ಕ್ವತಲ್‌ ರಕ್ಷಣೆಯ ಹೊಣೆಯನ್ನು ಪಾಕಿಸ್ತಾನ ಸೇನೆಯೇ ಹೊತ್ತಿತ್ತು. ಎಲ್‌ಇಟಿಯೂ ಹೆಚ್ಚುವರಿ ಭದ್ರತೆ ಒದಗಿಸಿತ್ತು. ಆದಾಗ್ಯೂ, ಆತನ ಮೇಲೆ ಶನಿವಾರ ರಾತ್ರಿ 7ರ ಸುಮಾರಿಗೆ ಅಪರಿಚಿತರು ದಾಳಿ ಮಾಡಿದ್ದಾರೆ. ಅವರು, 15-20 ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ವತಲ್‌, ಲಷ್ಕರ್‌-ಎ-ತಯಬಾ ಸಂಸ್ಥಾಪಕ ಹಾಗೂ 2008ರ ನವೆಂಬರ್‌ 26ರಂದು ಮುಂಬೈ ಮೇಲೆ ನಡೆದ ದಾಳಿಯ ಮಾಸ್ಟರ್‌ಮೈಂಡ್‌ ಹಫೀಜ್‌ ಸಯೀದ್‌ನ ಸಂಬಂಧಿ ಹಾಗೂ ಸಹಚರ. ಆತನನ್ನು ಸಂಘಟನೆಯ ಮುಖ್ಯ ಕಾರ್ಯಾಚರಣಾ ಕಮಾಂಡರ್‌ ಆಗಿ ನೇಮಿಸಿದ್ದ ಸಯೀದ್‌, ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸಲು ಆದೇಶಿಸಿದ್ದ.

ಲಷ್ಕರ್‌-ಎ-ತಯಬಾ ಸಂಸ್ಥಾಪಕ ಹಾಗೂ ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಹಫೀಜ್‌ ಸಯೀದ್‌

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡಾಂಗ್ರಿಯಲ್ಲಿ 2023ರ ಜನವರಿಯ 1ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕ್ವತಲ್‌ ವಿರುದ್ಧ ಆರೋಪ ಪಟ್ಟಿ ದಾಖಲಿಸಿದೆ. ಆ ದಿನ ಉಗ್ರರು ಏಕಾಏಕಿ ನಡೆಸಿದ ಗುಂಡಿನ ಈ ದಾಳಿಯಲ್ಲಿ 7 ನಾಗರಿಕರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದರು.

ಸಂಘಟನೆಗೆ ಉಗ್ರರ ಸೇರ್ಪಡೆ ಹಾಗೂ ಭಾರತದ ಗಡಿಯುದ್ದಕ್ಕೂ ನಿಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕ್ವತಲ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ, ಅದರಲ್ಲೂ ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿ ಮೇಲೆ ದಾಳಿ ಸಂಘಟಿಸುತ್ತಿದ್ದ.

2002-03ರಲ್ಲಿ ಭಾರತದ ಗಡಿ ಪ್ರವೇಶಿಸಿದ್ದ ಕ್ವತಲ್‌ಗೆ, ಅಲಿ, ಹಬೀಬುಲ್ಲಾ, ನೌಮನ್‌, ಮೊಹಮ್ಮದ್‌ ಕ್ವಾಸಿಂ ಎಂಬಿತ್ಯಾದಿ ಹೆಸರುಗಳಿವೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries