HEALTH TIPS

ಹೀಥ್ರೊ: ಸಹಜ ಸ್ಥಿತಿಗೆ ವಿಮಾನ ಸಂಚಾರ ಸೇವೆ

ಲಂಡನ್‌: ಲಂಡನ್‌ನ ಹೀಥ್ರೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಟುವಟಿಕೆ ಸಹಜ ಸ್ಥಿತಿಗೆ ಮರಳಿದ್ದು, ವಿಮಾನಗಳ ಸಂಚಾರ ಶನಿವಾರ ಪುನರಾರಂಭವಾಗಿದೆ' ಎಂದು ವಿಮಾನ ನಿಲ್ದಾಣ ತಿಳಿಸಿದೆ.

ನಿಲ್ದಾಣ ಸಮೀಪದ ವಿದ್ಯುತ್ ಉಪ ಸ್ಥಾವರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಿಂದಾಗಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿ ವಿಮಾನ ಸಂಚಾರ ರದ್ದುಪಡಿಸಲಾಗಿತ್ತು.

ಕೆಲ ವಿಮಾನಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು.

'ಹೆಚ್ಚುವರಿ ಉದ್ಯೋಗಿಗಳಿದ್ದು, ಹೆಚ್ಚುವರಿ 10,000 ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ವಿಮಾನಗಳ ಹಾರಾಟಕ್ಕೆ ಸಮಯ ನಿಗದಿಪಡಿಸಿದ್ದೇವೆ' ಎಂದು ವಿಮಾನ ನಿಲ್ದಾಣದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.

ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಶುಕ್ರವಾರ ಅಂದಾಜು 1,300 ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಇದರಿಂದಾಗಿ 2 ಲಕ್ಷ ಪ್ರಯಾಣಿಕರಿಗೆ ಅನನುಕೂಲವಾಗಿತ್ತು.

ಅಗ್ನಿ ಅವಘಡ ಹಾಗೂ ಇದರಿಂದಾಗಿ ಪ್ರಮುಖ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆ ಬಂದ್ ಕುರಿತಂತೆ ಹಲವರು ನಿಲ್ದಾಣದ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದಾರೆ.

'ಸ್ಥಳೀಯ ಆಡಳಿತವು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ವೈಫಲ್ಯ ಕುರಿತು ವಿಸ್ತೃತ ತನಿಖೆ ಅಗತ್ಯವಿದ್ದು, ಮತ್ತೆ ಇಂತಹ ಸ್ಥಿತಿಮರಳದಂತೆ ಜಾಗ್ರತೆ ವಹಿಸಬೇಕಾಗಿದೆ' ಎಂದು ಬ್ರಿಟನ್ ಸರ್ಕಾರ ಪ್ರತಿಕ್ರಿಯಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries