ಮಂಜೇಶ್ವರ::ತಲೇಕಳ ಶ್ರೀಸದಾಶಿವ ರಾಮ ವಿಠಲದೇಗುಲದಲ್ಲಿ ಮಹಾಶಿವರಾತ್ರಿಯನ್ನುಭಕ್ತಿ,ಶ್ರದ್ಧೆಯಿಂದಆಚರಿಸಲಾಯಿತು. ಶ್ರೀಕ್ಷೇತ್ರದ ಪ್ರಧಾನ ದೇವರಾದ ಶ್ರೀಸದಾಶಿವ ದೇವರಿಗೆ ಪಂಚಾಮೃತ ರುದ್ರಾಭಿμÉೀಕ ಹಾಗೂ ರಾತ್ರಿ ಸರ್ವಸೇವೆ ಸಹಿತ ವಿಶೇಷ ಏಕಾದಶ ರುದ್ರಭಿμÉೀಕ ದೇವಸ್ಥಾನದ ಮೊಕ್ತೇಸರ ವಾಸುದೇವ ಭಟ್ ವಿಪ್ರರಾದ ಲಕ್ಷ್ಮೀಶ ಹಾಗೂ ಶಿವರಾಜರಿಂದ ಶ್ರದ್ದಾ ಭಕ್ತಿಗಳಿಂದ ನಡೆಯಿತು. ಈ ಸುಸಂದರ್ಭದಲ್ಲಿ ಶ್ರೀ ಸದಾಶಿವ ದೇವರಿಗೆ ವಿನೂತನ ಬೆಳ್ಳಿಯ ದೃಷ್ಠಿಯನ್ನು ತಲೇಕಳ ಸಂಕೇಸ ಮನೆಯಿಂದ ಮಹಾಶಿವರಾತ್ರಿ ಪುಣ್ಯ ದಿವಸದಂದು ಸಮರ್ಪಿಸಲಾಯಿತು. ಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಸ್ಥಳಿಯ ಹಾಗೂ ರಂಗ ವಿಠಲ ಭಜನ ಮಂಡಳಿ ಚಿಗುರುಪಾದೆ ರಂಡದವರಿಂದ ಭಜನಾ ಸೇವೆ ನಡೆಯಿತು.