ಕಾಸರಗೋಡು: ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ-2025 ಮತ್ತು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ನಡೆಯಲಿರುವ ಕನ್ನಡ ನಾಟಕೋತ್ಸವದ ಯಶಸ್ವಿಗಾಗಿ ವಿಶೇಷ ಸಭೆ ಇಂದು(ಮಾರ್ಚ್ 16) ಸಂಜೆ 4ಕ್ಕೆ ಕಾಸರಗೋಡು ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಜರುಗಲಿದೆ. ಮಾರ್ಚ್ 27ರಂದು ಕನ್ನಡಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲೆ ಮತ್ತು ಕಾಸರಗೋಡು ಕನ್ನಡ ಗ್ರಾಮ ಪರಿಸರದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆ ಆಯೋಜಿಸಲಾಗಿದೆ.
ಕಾಸರಗೋಡು ಜಿಲ್ಲಾ ಚುಟಕು ಸಾಹಿತ್ಯ ಪರಿಷತ್ 25ನೇ ರಜತ ಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಹಾಗೂ ವಿ.ಕೆ. ಎಂ. ಕಲಾವಿದರು (ರಿ) ಬೆಂಗಳೂರು ಸಹಯೋಗದಲ್ಲಿ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ -2025 ಮತ್ತು ಕರ್ನಾಟಕ ಗಡಿನಾಡ ಉತ್ಸವ,ವಿಶ್ವ ರಂಗಭೂಮಿ ದಿನಾಚರಣೆಯಂದು ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾ. 27ರಂದು ಬೆಳಿಗ್ಗೆ ಗಂಟೆ 8.30 ರಿಂದ ಆಯೋಜಿಸಲಾಗಿದೆ.