ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಮಾ. 30ರಂದು ಜರುಗಲಿದೆ. ವೃಷಭ ಲಗ್ನ ಸುಮುಹೂರ್ತದಲ್ಲಿ ಬೆಳಗ್ಗೆ 9.10ರಿಂದ 11ಗಂಟೆಯ ಒಳಗೆ ಮಧೂರು ಶ್ರೀ ಮದನಂತೇಶ್ವರ ದೇವರ ಪ್ರಾಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಟೆ, ಜೀವಕುಂಭಾಭಿಷೇಕ, ಹಂಸರೂಪೀ ಸದಾಶಿವ-ಕಾಶೀ ವಿಶ್ವನಾಥ, ಉಪದೇವತೆಗಳ ಲಿಂಗ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಸಂಜೆ 5.00 ಗಂಟೆಯಿಂದ ಶ್ರೀದುರ್ಗಾ, ಸುಬ್ರಹ್ಮಣ್ಯ, ಶಾಸ್ತಾ ಬಿಂಬಾದಿವಾಸ, ವೀರಭದ್ರ ಅಧಿವಾಸ, ಅಧಿವಾಸ ಹೋಮಗಳು ಹಂಸರೂಪಿ ಸದಾಶಿವ ಕಾಶೀ ವಿಶ್ವನಾಥ ಸನ್ನಿಧಿಯಲ್ಲಿ ಕಲಶಾಧಿವಾಸ ನಡೆಯುವುದು.
ಪೂರ್ಣನವಗ್ರಹ ಹೋಮ:
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಪೂರ್ಣನವಗ್ರಹ ಹೋಮ, ಅವಗಾಹ, ಸೇಕಬಿಂಬ ಶುದ್ಧಿ ಪ್ರಕ್ರಿಯೆ, ವಿಶೇಷ ಪ್ರಾಯಶ್ಚಿತ್ತ ಹೋಮ, ವಿಶೇಷ ಶಾಂತಿಹೋಮ, ಅಮೃತ ಶಾಂತಿ ಹೋಮ ನೆರವೇರಿತು.
ಬ್ರಹ್ಮಶ್ರೀ ದೇರೆಬೈಲು ಡಾಲ ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಸಂಜೆ ನವಶಕ್ತಿ ಹೋಮ, ಜೀವಕುಂಭಾಧಿವಾಸ, ಅಷ್ಟಬಂಧಾಧಿವಾಸ, ಉಪದೇವತಾ ಹಂಸರೂಪೀ ಸದಾಶಿವ ಹಾಗೂ ಕಾಶೀ ವಿಶ್ವನಾಥ ಲಿಂಗಾಧಿವಾಸ, ಅಧಿವಾಸ ಹೋಮ, ನಾಳ ಶೋಧನೆ ನಡೆಯಿತು.
: ಮಧೂರು ದೇಗುಲದಲ್ಲಿ ಪೂರ್ಣನವಗ್ರಹ ಹೋಮ, ಅಮೃತ ಶಾಂತಿಹೋಮ, ಬಿಂಬ ಶುದ್ಧಿ ಪ್ರಕ್ರಿಯೆ ನಡೆಯಿತು.