ನೇಪಾಳ : ಹಿಂದೂಗಳ ಪವಿತ್ರ ಸ್ಥಳ ಮಾನಸಸರೋವರಕ್ಕೆ ರಸ್ತೆ ಮೂಲಕ ತೆರಳುವ ಭಕ್ತಾದಿಗಳ ಬಹುದಿನಗಳ ಕನಸು ಇದೀಗ ನನಸಾಗುವ ಕಾಲ ಸನ್ನಿಹಿತವಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರುವ ಮಾಹಿತಿ ಪ್ರಕಾರ, ಪಿತೋರಾಘರ್ ಹಾಗೂ ಕೈಲಾಶ್ ಮಾನಸ ಸರೋವರ ಸಂಪರ್ಕ ಕಲ್ಪಿಸುವ ರಸ್ತೆ ಶೇಕಡ 85 ರಷ್ಟು ಕಂಪ್ಲೀಟ್ ಆಗಿದ್ದು , ಶೀಘ್ರ ಲೋಕಾರ್ಪಣೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಕ್ಕಿಂ ಮತ್ತು ನೇಪಾಳ ಮಾರ್ಗಕ್ಕಿಂತಲೂ ಶೀಘ್ರವಾಗಿ ಮಾನಸ ಸರೋವರ ತಲುಪಬಹುದಾಗಿದೆ. ರಸ್ತೆ ಕಾಮಗಾರಿ ಮುಗಿದ ಬಳಿಕ ಚೀನಾ ಜತೆ ಉಳಿದ 18 ಕಿಮೀ ರಸ್ತೆ ನಿರ್ಮಾಣ ಸಂಬಂಧ ಮಾತುಕತೆ ನಡೆಸಲು ಉತ್ಸುಕರಾಗಿದ್ದೇವೆ ಎಂದು ಗಡ್ಕರಿ ಹೇಳಿದ್ದಾರೆ.
ಹವಾಮಾನ ವೈಪರೀತ್ಯದ ನಡುವೆಯೂ ರಭಸವಾಗಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅಂದುಕೊಂಡ ವೇಳೆಯಲ್ಲೇ ಗುರಿ ಮುಟ್ಟುತ್ತೇವೆ. ಶೀಘ್ರ ನಾಗರೀಕ ಸೇವೆಗೂ ರಸ್ತೆ ಲೋಕಾರ್ಪಣೆ ಆಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬದಲಾದ ಆಟೋ ಮೊಬೈಲ್ಸ್ ಸೆಕ್ಟರ್ ನ ಆವಿಷ್ಕಾರದ ಭಾಗವಾಗಿ ದೇಶದಲ್ಲಿ ಇವಿ ವೆಹಿಕಲ್ ಉತ್ಪಾದನೆ ಹಾಗೂ ಮಾರುಕಟ್ಟೆ ವಿಸ್ತರಣೆ ಬಗ್ಗೆಯೂ ಹಲವು ನಿರ್ಣಾಯಕ ತೀರ್ಮಾನಗಳನ್ನು ಭವಿಷ್ಯದಲ್ಲಿ ಕೈಗೊಳ್ಳೋದಾಗಿ ಗಡ್ಕರಿ ಹೇಳಿದ್ದಾರೆ.