ಉಪ್ಪಳ: ಬಾಯಾರು ಗ್ರಾಮದ ಧರ್ಮತ್ತಡ್ಕ ಸಮೀಪ ಕರುವಜೆ ಪರಿಸರದಲ್ಲಿ ಶ್ರೀನಾಗ, ರಕ್ತೇಶ್ವರೀ ಮತ್ತು ಗುಳಿಗ ದೈವಗಳ ಬನವಿದ್ದು, ಹಲವಾರು ಕಾರಣಗಳಿಂದ ಅಂದಾಜು ಸುಮಾರು 100ಕ್ಕೂ ಅಧಿಕ ವಷರ್Àಗಳಿಂದ ಈ ಬನದಲ್ಲಿ ಸಾನ್ನಿಧ್ಯಗಳ ಆರಾಧನೆ ನಿಂತುಹೋಗಿದೆ.
ಇದೀಗ ಶ್ರೀ ರಕ್ತೇಶ್ವರಿ ಬನದ ಜೀರ್ಣೋದ್ಧಾರಗೊಳಿಸಲು ನಿಶ್ಚಯಿಸಿದ್ದು, ಈ ಬಗ್ಗೆ ಊರಿನ ಭಗವದ್ಭಕ್ತರನ್ನು ಸೇರಿಸಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಬಗ್ಗೆ ಡಿ. 5 ರಂದು ಜ್ಯೋತಿಷಿಗಳ ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿದ್ದು, ಮುಂದುವರಿದು ವಾಸ್ತು ಶಿಲ್ಪಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು ಇವರ ಆಚಾರ್ಯತ್ವದಲ್ಲಿ ಮುಂದಿನ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದೆ. ಪೂರ್ವಭಾವಿಯಾಗಿ ಇಂದು (ಮಂಗಳವಾರ) ಸಾನ್ನಿಧ್ಯಗಳ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮ ನಡೆಯಲಿದೆ.