ದಲ್ಲಾಸ್: ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರ ಹತ್ಯೆಗೆ ಸಂಬಂಧಿಸಿದ ಕಡತಗಳನ್ನು ಬಿಡುಗಡೆ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
1963ರಲ್ಲಿ ನಡೆದ ಹತ್ಯೆ ಕುರಿತ ಕಡತಗಳನ್ನು ಬಿಡುಗಡೆ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಟ್ರಂಪ್ ಭರವಸೆ ನೀಡಿದ್ದರು.
ಆಡಳಿತವು 80,000 ಕಡತಗಳನ್ನು ಬಿಡುಗಡೆ ಮಾಡಲಿದೆ. ಕಡತಗಳಿಗೆ ಯಾವುದೇ ತಿದ್ದುಪಡಿ ಮಾಡಿಲ್ಲ. ಕೆನಡಿ ಅವರ ಹತ್ಯೆ ಮತ್ತು ನಂತರದ ಘಟನೆಗಳ ಕುರಿತ ವಿವರವಾದ ಮಾಹಿತಿ ಕಡತಗಳಲ್ಲಿ ಇದೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.